‘ರಾಬರ್ಟ್’ ನಿರ್ದೇಶಕ ತರುಣ್ ಸುಧೀರ್ ನ್ಯೂಸ್ ಫಸ್ಟ್ ಜೊತೆ ಮಾತನಾಡಿ ‘ರಾಬರ್ಟ್’ ಚಿತ್ರೀಕರಣದ ಅನುಭವಗಳನ್ನ ಮೆಲುಕು ಹಾಕಿದ್ದಾರೆ. ಅದರಲ್ಲೂ ‘ರಾಬರ್ಟ್’ ಚಿತ್ರೀಕರಣದ ವೇಳೆ ಎಲ್ಲವೂ ಪಾಸಿಟಿವ್ ಆಗಿದ್ದರೂ ಕೂಡ, ಅದ್ಯಾವುದೋ ಒಂದು ವಿಷಯ ತರುಣ್ ಸುಧೀರ್ಗೆ ಭಯ ಹುಟ್ಟಿಸಿತ್ತು ಅಂತಿದ್ದಾರೆ.
ಹೌದು.. ‘ರಾಬರ್ಟ್’ ಸಿನಿಮಾದ ಸ್ಟಾರ್ ನಟರ ದಂಡೇ ಇದೆ. ಇದೇ ಒಂದು ಅಂಶ ನಿರ್ದೇಶಕ ತರುಣ್ ಸುಧೀರ್ಗೆ ಭಯ ಹುಟ್ಟಿಸಿತ್ತು ಅಂತಾರೆ. ಎಲ್ಲವೂ ಸರಿ ಹೋಗ್ತಿರುವಾಗ, ಎಲ್ಲಾ ಸ್ಟಾರ್ ನಟರನ್ನ ಒಂದೇ ಸಿನಿಮಾದಲ್ಲಿ ಹೇಗೆ ಹ್ಯಾಂಡಲ್ ಮಾಡೋದು ಅನ್ನೋ ಟೆನ್ಶನ್ ತರುಣ್ಗೂ ಆಗಿತ್ತು. ಆದ್ರೆ ನಟರೆಲ್ಲಾ ತರುಣ್ಗೆ ಫೇವರೇಬರ್ ಆಗಿ ಕಂಫರ್ಟೇಬಲ್ ಆಗಿದ್ದರು ಅಂತ ತರುಣ್ ಹೇಳಿಕೊಂಡಿದ್ದಾರೆ.
‘ರಾಬರ್ಟ್ ಸಿನಿಮಾದ ಬಗ್ಗೆ ಪಾಸಿಟಿವ್ ಇರೋದರ ಜೊತೆಗೆ ಭಯನೂ ಇತ್ತು. ಬಹುದೊಡ್ಡ ತಾರಾಗಣ.. ದರ್ಶನ್ ಸರ್, ಜಗಪತಿ ಬಾಬು ಸರ್, ರವಿಶಂಕರ್ ಸರ್, ರವಿಕಿಶನ್ ಸರ್, ದೇವರಾಜ್ ಸರ್ ಎಲ್ಲರು ಇದ್ದಾರೆ. ಇವರನ್ನೆಲ್ಲಾ ಹೇಗೆ ಹ್ಯಾಂಡಲ್ ಮಾಡಲೀ ಅಂತ ಅನಿಸಿತ್ತು. ಆದ್ರೆ ಇವರೆಲ್ಲರೂ ನನ್ನ ಕಂಫರ್ಟೇಬಲ್ ಫೀಲ್ ಮಾಡಿಸಿದ್ರು. ನನ್ನ ವಿಶನ್ ತಕ್ಕಂತೆ ಸಪೋರ್ಟ್ ಮಾಡಿದ್ರು. ನನಗೆ ಈ ಸಿನಿಮಾ ಮಾಡೋದಕ್ಕೆ ಅದೂ ಒಂದು ದೊಡ್ಡ ಪ್ಲಸ್ ಆಗಿದೆ. ಎಲ್ಲಾ ಸೀನ್ಗಳು ನನಗೆ ಚಾಲೆಂಜಿಂಗ್ ಆಗಿತ್ತು. ಅದರಲ್ಲೂ ಕ್ಲೈಮ್ಯಾಕ್ಸ್ ಸೀನ್ ನನಗೆ ಬಹಳ ಚಾಲೆಂಜಿಂಗ್ ಆಗಿತ್ತು. ದರ್ಶನ್ ಸರ್ನ ಡಿಫರೆಂಟ್ ಆಗಿ ತೊರಿಸೋ ಪ್ರಯತ್ನ ಮಾಡಿದ್ದೀನಿ ಕ್ಲೈಮ್ಯಾಕ್ಸ್ನಲ್ಲಿ. ಕ್ಲೈಮ್ಯಾಕ್ಸ್ ನೋಡಿ ಜನ ಹೊರಗಡೆ ಬರ್ತಾ, ವಾವ್ ಬಾಸ್ನ ಈ ರೀತಿ ನೋಡೋದಕ್ಕೆ ಖುಷಿಯಾಯ್ತು ಗುರು ಅನ್ನಬೇಕು.’
ತರುಣ್ ಸುಧೀರ್, ನಟ-ನಿರ್ದೇಶಕ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post