ಮೈಸೂರು: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಗಲಾಟೆಯಲ್ಲಿ ಬಾಳೆತೋಟ ಹಾಗೂ ರಾಗಿ ಬೆಳೆ ನಾಶ ಮಾಡಿರುವ ಕೃತ್ಯ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆ ನಡೆದಿದೆ ಎನ್ನಲಾದ ದ್ವಿಚಕ್ರ ವಾಹನ ವಿಚಾರವಾಗಿ ಆರಂಭವಾದ ಗಲಾಟೆ ಇಂದು ತಾರಕ್ಕಕ್ಕೇರಿದ್ದು, ಘಟನೆಯಲ್ಲಿ ಇಬ್ಬರು ಚಾಕು ಇರಿತದಿಂದ ಗಾಯಗೊಂಡಿದ್ದಾರೆ. ಅಲ್ಲದೇ ಗ್ರಾಮದಲ್ಲೇ ಇದ್ದ ಫಲ ನೀಡಿಲು ಸಿದ್ಧವಾಗಿದ್ದ ಬಾಳೆ ತೋಟಗಳನ್ನು ಕಡಿದು ಹಾಕಲಾಗಿದೆ. ಹಾಗೂ ಎರಡು 2 ಭಾರಿ ಗಾತ್ರದ ರಾಗಿ ಮೆದೆಗಳಿಗೆ ಬೆಂಕಿ ಇಡಲಾಗಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಕೆ.ಆರ್. ಆಸ್ಪತ್ರೆ ತುರ್ತು ಘಟಕದಲ್ಲಿ ದಾಖಲಿಸಲಾಗಿದೆ. ಸದ್ಯ ಘಟನಾ ಸ್ಥಳದಲ್ಲಿ ನಂಜನಗೂಡು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದು, ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post