ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ ಸಿನಿಮಾ ಇದೇ ಮಾರ್ಚ್ 11ರಂದ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಅದ್ಧೂರಿ ರಿಲೀಸ್ ಸಾಕ್ಷಿಯೆಂಬಂತೆ ‘ರಾಬರ್ಟ್’ ಚಿತ್ರತಂಡ ಇಂದು ಪ್ರೀ-ರಿಲೀಸ್ ಸಮಾರಂಭ ಹಮ್ಮಿಕೊಂಡಿದೆ. ಹುಬ್ಬಳ್ಳಿಯಲ್ಲಿ ಇಂದು ಸಂಜೆ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳಾಗಿ ಅನೇಕರು ಆಗಮಿಸುತ್ತಿದ್ದಾರೆ.
ಹೌದು.. ದರ್ಶನ್ ‘ರಾಬರ್ಟ್’ ಪ್ರೀ-ರಿಲೀಸ್ಗೆ ಶುಭ ಕೋರಲು ದರ್ಶನ್ ಅಭಿಮಾನಿಗಳನ್ನ ಹೊರತುಪಡಿಸಿ ಇನ್ನೂ ಅನೇಕರು ಭಾಗಿಯಾಗಲಿದ್ದಾರೆ. ಅಭಿಷೇಕ್ ಅಂಬರೀಶ್, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ನಟ ಶರಣ್ ಈ ಕಾರ್ಯಕ್ರಮದ ರಂಗು ಹೆಚ್ಚಿಸಲಿದ್ದಾರೆ. ಇಂದು ಸಂಜೆ ಆರು ಗಂಟೆಯಿಂದ ‘ರಾಬರ್ಟ್’ ಪ್ರೀ-ರಿಲೀಸ್ ಕಾರ್ಯಕ್ರಮ ಶುರುವಾಗಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post