ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಸಿನಿಮಾ ‘ರಾಬರ್ಟ್’ ರಿಲೀಸ್ಗೆ ದಿನಗಣನೆ ಆರಂಭವಾಗಿದೆ. ಇದೇ ಮಾರ್ಚ್ 11ರಂದು ‘ರಾಬರ್ಟ್’ ಸಿನಿಮಾ ಥಿಯೇಟರ್ಗಳಿಗೆ ಲಗ್ಗೆ ಇಟ್ಟು ಅಬ್ಬರಿಸಲಿದೆ. ಇನ್ನು ಇಂದು ಹುಬ್ಬಳ್ಳಿಯ ನೆಲದಲ್ಲಿ ‘ರಾಬರ್ಟ್’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಕೂಡ ನಡೆಯಲಿದ್ದು, ಈಗಾಗಲೇ ಫ್ಯಾನ್ಸ್ ಖುಷಿಗೆ ಕಡಿವಾಣವೇ ಇಲ್ಲದಂತಾಗಿದೆ. ‘ರಾಬರ್ಟ್’ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಿರುವ ನಟ ವಿನೋದ್ ಪ್ರಭಾಕರ್ ನ್ಯೂಸ್ ಫಸ್ಟ್ ಜೊತೆ ಮಾತನಾಡಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಹೆಚ್ಚು ಹೇಳಿಕೊಳ್ಳದ ಮರಿ ಟೈಗರ್, ‘ರಾಬರ್ಟ್’ ಸಿನಿಮಾದ ಬಗ್ಗೆ ಯತೇಚ್ಛವಾಗಿಯೇ ಬಿಚ್ಚಿಟ್ಟಿದ್ದಾರೆ.
ಇಂದು ಸಣ್ಣ ಝಲಕ್ನಲ್ಲಿ ಟ್ರೈಲರ್ನಲ್ಲಿ ಕಾಣಿಸಿಕೊಂಡಿರುವ ವಿನೋದ್ ಪ್ರಭಾಕರ್, ತಮ್ಮ ಪಾತ್ರದ ಬಗ್ಗೆ ಹೆಚ್ಚು ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದಾರೆ. ‘ರಾಬರ್ಟ್’ ಸಿನಿಮಾ ನೋಡಿದ ಜನ ತಮ್ಮನ್ನ ನಂತರದಲ್ಲಿ ಡಬಲ್ ಇಷ್ಟ ಪಡೋದು ಗ್ಯಾರೆಂಟಿ ಅಂತಾರೆ ಮರಿ ಟೈಗರ್. ಇದರ ಜೊತೆಗೆ ತಮ್ಮ ತಂದೆಯವರನ್ನ ನೆನೆಪಿಸಿಕೊಂಡ ವಿನೋದ್ ಪ್ರಭಾಕರ್, ಹುಬ್ಬಳ್ಳಿ ಜನ ಟೈಗರ್ ಪ್ರಭಾಕರ್ಗೆ ಹೆಚ್ಚು ಪ್ರೀತಿ ಕೊಟ್ಟಿದ್ದಾರೆ ಅಂದಿದ್ದಾರೆ.
‘ನಾನು ಕೊನೆಯ ಬಾರಿ ಟೈಸನ್ ಸಿನಿಮಾದ ವಿಚಾರವಾಗಿ ಹುಬ್ಬಳ್ಳಿಗೆ ಬಂದಿದ್ದೆ. ಇವತ್ತು ಮತ್ತೆ ರಾಬರ್ಟ್ ಸಿನಿಮಾಗಾಗಿ ಬಂದಿರೋದು ಖುಷಿಯಾಗ್ತಿದೆ. ಹೈದರಾಬಾದ್ನ ಏರ್ಪೋರ್ಟ್ನಿಂದ ಹೊರಗಡೆ ಬರ್ತಿದ್ದಂತೆ ದರ್ಶನ್ ದೊಡ್ಡ ಫ್ಲೆಕ್ಸ್ ನೋಡಿ ತುಂಬಾ ಖುಷಿಯಾಯ್ತು. ರಾಬರ್ಟ್ ಪ್ರೋಮೋಷನ್ಸ್ ಅಂದ್ರೆನೇ ಹಾಗಿದೆ. ಹೈದರಾಬಾದ್ನಲ್ಲಿ ಹೋಟೆಲ್ ಹೋಗೋ ದಾರಿಯುದ್ದಕ್ಕೂ ರಾಬರ್ಟ್ ಪೋಸ್ಟರ್ಗಳೇ ಕಾಣಿಸ್ತಿದ್ವು. ಆ ಕಡೆ ತಿರುಗಿದ್ರೂ ರಾಬರ್ಟ್, ಈ ಕಡೆ ತಿರುಗಿದ್ರೂ ರಾಬರ್ಟ್.
ಇನ್ನು ಹುಬ್ಬಳ್ಳಿಗೆ ಬರ್ತಾನೇ ಎಲ್ಲರೂ ಡಿ ಬಾಸ್, ಟೈಗರ್ ಅಂತ ಕಿರುಚ್ತಿದ್ರು. ನಮ್ಮ ಜನರ ಪ್ರೀತಿನೇ ಹಾಗೇ, ನಮ್ಮ ತಂದೆಯವರನ್ನೂ ಬಹಳ ಬೆಳೆಸಿರೋದು ಇವರೇ. ಇದೇ ಜಾಗದವರು. ನಮ್ಮ ತಂದೆಯವರ ಯಾವುದೇ ಸಿನಿಮಾ ರಿಲೀಸ್ ಆದ್ರೂ, ಇಲ್ಲಿ ಒಳ್ಳೆಯ ಓಪನಿಂಗ್ ಸಿಗ್ತಿತ್ತು. ನನಗಂತೂ ಇಲ್ಲಿ ಕಾರ್ಯಕ್ರಮ ನಡೆಯುತ್ತಿರೋದು ಬಹಳ ಬಹಳ ಸಂತೋಷ ಆಗ್ತಿದೆ. ನನ್ನ ಪಾತ್ರದ ಬಗ್ಗೆ ಹೆಚ್ಚು ಮಾತಾಡಲ್ಲ ನಾನು. ರಾಬರ್ಟ್ ಸಿನಿಮಾನೇ ಜಾಸ್ತಿ ಮಾತಾಡುತ್ತೆ. ಎಲ್ಲರ ಪ್ರೋತ್ಸಾಹ, ಬೆಂಬಲ ಹಾಗೂ ಆಶೀರ್ವಾದ ಬೇಕೇ ಬೇಕು. ಇತ್ತೀಚೆಗೆ ರಿಲೀಸ್ ಆದ ನನ್ನ ಶ್ಯಾಡೋ ಸಿನಿಮಾಗೂ ಜನ ಸಪೋರ್ಟ್ ಮಾಡಿದ್ದಾರೆ.
ಮೊದಲ ಬಾರಿ ಈ ಲುಕ್ನಲ್ಲಿ ನಾನು ಕಾಣಿಸಿಕೊಳ್ತಿದ್ದೀನಿ. ಅದೂ ರಾಬರ್ಟ್ ಸಿನಿಮಾದಲ್ಲಿ. ನನ್ನ ಪಾತ್ರದ ಬಗ್ಗೆ ಹೆಚ್ಚು ನಾನು ಹೇಳೋದಿಲ್ಲ. ಆದ್ರೆ ಈ ಸಿನಿಮಾದ ನಂತರ ಜನ ನನ್ನನ್ನ ಖಂಡಿತ ಹೆಚ್ಚು ಇಷ್ಟ ಪಡ್ತಾರೆ. ನಾನಿವತ್ತು ರಾಬರ್ಟ್ ಸಿನಿಮಾದಲ್ಲಿ ಇರೋದಕ್ಕೆ ದರ್ಶನ್, ಉಮಾಪತಿ ಶ್ರೀನಿವಾಸ್ ಹಾಗೂ ತರುಣ್ ಕಾರಣ. ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನ ಹೇಳ್ತೀನಿ.’
ವಿನೋದ್ ಪ್ರಬಾಕರ್, ನಟ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post