ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ ಸಿನಿಮಾದ ಮತ್ತೊಂದು ಹಾಡು ಸದ್ಯ ಬಿಡುಗಡೆಯಾಗಿದೆ. ಈ ಬಾರಿ ವಿಡಿಯೋ ಹಾಡು ಲಾಂಚ್ ಮಾಡಿದ್ದು, ದರ್ಶನ್ ಜಬರ್ದಸ್ತ್ ಸ್ಟೆಪ್ಸ್ ನೋಡಿ ಅಭಿಮಾನಿಗಳೂ ಸರ್ಪ್ರೈಸ್ ಆಗಿದ್ದಾರೆ. ಇದು ‘ರಾಬರ್ಟ್’ ಸಿನಿಮಾದ ಐದನೇ ಹಾಡಾಗಿದ್ದು, ರಿಲೀಸ್ ಆದ ಮೊದಲ ವಿಡಿಯೋ ಹಾಡು ಇದಾಗಿದೆ. “ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ” ಅನ್ನೋ ಹಾಡು ಇದಾಗಿದ್ದು, ಈಗಾಗಲೇ ತೆಲುಗಿನಲ್ಲಿ ರಿಲೀಸ್ ಆಗಿದೆ.
ಫೆಬ್ರವರಿ 26ರಂದು ಹೈದರಾಬಾದ್ನಲ್ಲಿ ನಡೆದ ‘ರಾಬರ್ಟ್’ ತೆಲುಗು ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ತೆಲುಗು ವರ್ಶನ್ ಹಾಡನ್ನ ಬಿಡುಗಡೆ ಮಾಡಲಾಗಿತ್ತು. ಇದೀಗ ಇಂದು ಹುಬ್ಬಳ್ಳಿಯಲ್ಲಿ ಕನ್ನಡ ‘ರಾಬರ್ಟ್’ ಸಿನಿಮಾದ ಪ್ರೀ-ರಿಲೀಸ್ ಸಮಾರಂಭಕ್ಕೂ ಮುನ್ನ ಈ ವಿಡಿಯೋ ಸಾಂಗ್ ಯೂ ಟ್ಯೂಬ್ನಲ್ಲಿ ಲಾಂಚ್ ಆಗಿದೆ.‘
ಅರ್ಜುನ್ ಜನ್ಯಾ ಸಂಗೀತ ನೀಡಿರುವ ‘ರಾಬರ್ಟ್’ ಸಿನಿಮಾದ ಹಾಡುಗಳು ಈಗಾಗಲೇ ಸಖತ್ ಸೌಂಡ್ ಮಾಡಿವೆ. ಇನ್ನು ಇಂದು ರಿಲೀಸ್ ಆದ ಹಾಡನ್ನ ಕರಾವಳಿ ಮೂಲದ ಬಾಲಿವುಡ್ ಗಾಯಕ ನಕಾಶ್ ಅಜೀಜ್ ಹಾಡಿದ್ದು, ಐಶ್ವರ್ಯ ರಂಗರಾಜನ್ ಧ್ವನಿಗೂಡಿಸಿದ್ದಾರೆ. ಸದ್ಯ ಅಭಿಮಾನಿಗಳು ದರ್ಶನ್ರ ಹಳೆಯ ಲುಕ್ ಆ್ಯಂಡ್ ಸ್ಟೆಪ್ಸ್ ಕಂಡು ಥ್ರಿಲ್ ಆಗಿರೋದಂತೂ ನಿಜ. ಹಾಡುಗಳಲ್ಲೇ ವೆರೈಟಿ ನೀಡಿರುವ ನಿರ್ದೇಶಕ ತರುಣ್ ಸುಧೀರ್, ಸಿನಿಮಾದಲ್ಲಿ ಏನು ಸರ್ಪ್ರೈಸ್ ನೀಡಲಿದ್ದಾರೆ ಅನ್ನೋ ನಿರೀಕ್ಷೆ ಹೆಚ್ಚಾಗಿದೆ.
ನಮ್ಮ #Roberrt ಚಿತ್ರದ ಮೊದಲ ವಿಡಿಯೋ ಸಾಂಗ್ #BabyDanceFloorReady ಈಗ ನಿಮ್ಮ ಮುಂದೆ. ನೋಡಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿhttps://t.co/8Zjsf8DN72@UmapathyFilms @TharunSudhir @StarAshaBhat @aanandaaudio pic.twitter.com/IaDVLdk4yh
— Darshan Thoogudeepa (@dasadarshan) February 28, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post