‘ರಾಬರ್ಟ್’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಇಂದು ಸಂಜೆ 6 ಗಂಟೆಯಿಂದ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಪ್ರೀ-ರಿಲೀಸ್ ಸಮಾರಂಭದ ಜೊತೆಗೆ ಆಡಿಯೋ ಲಾಂಚ್ಗೂ ಸಜ್ಜಾಗುತ್ತಿರುವ ಅದ್ಧೂರಿ ವೇದಿಕೆಯ ಬಗ್ಗೆ ‘ರಾಬರ್ಟ್’ ನಿರ್ದೇಶಕ ತರುಣ್ ಸುಧೀರ್ ಮಾತನಾಡಿದ್ದಾರೆ.
ಹೈದರಾಬಾದ್ನಲ್ಲಿ ತೆಲುಗು ಪ್ರೀ-ರಿಲೀಸ್ ಕಾರ್ಯಕ್ರಮವನ್ನ ಮುಗಿಸಿಕೊಂಡು ಬಂದಿರುವ ಚಿತ್ರತಂಡ, ಅದ್ಯಾಕೆ ಹುಬ್ಬಳ್ಳಿಯಲ್ಲಿ ಕನ್ನಡ ಪ್ರೀ-ರಿಲೀಸ್ ಮಾಡ್ತಿದ್ದಾರೆ ಅನ್ನೋದರ ಬಗ್ಗೆ ಕೂಡ ನಿರ್ದೇಶಕ ತರುಣ್ ಸುಧೀರ್ ಉತ್ತರಿಸಿದ್ದಾರೆ.
‘ಹುಬ್ಬಳ್ಳಿಯಲ್ಲಿ ನಡೆಯುವ ಈ ಈ ಕಾರ್ಯಕ್ರಮದ ಕ್ರೆಡಿಟ್ ದರ್ಶನ್ ಸರ್ಗೆ ಹೋಗ್ಬೇಕು. ಅವರಿಗೆ ಉತ್ತರ ಕರ್ನಾಟಕ ಕಡೆ ಅಭಿಮಾನಿಗಳನ್ನ ಭೇಟಿಯಾಗೋದಕ್ಕೇ ಆಗ್ತಿಲ್ಲ. ಸೋ.. ಕಾರ್ಯಕ್ರಮ ಏನಾದ್ರೂ ಮಾಡೋದಿದ್ರೆ, ಅಲ್ಲೇ ಮಾಡೋಣ್ವಾ ಅಂತ ಕೇಳಿದ್ರು. ರಾಬರ್ಟ್ ಪ್ರೀ-ರಿಲೀಸ್ ಅನ್ನೋದು ನೆಪ ಅಷ್ಟೆ. ಆದ್ರೆ ದರ್ಶನ್ ಸರ್ ಅವರ ಅಭಿಮಾನಿಗಳನ್ನ ಹತ್ತಿರದಲ್ಲಿ ಭೇಟಿ ಮಾಡಿ ಮಾತನಾಡೋದಕ್ಕೆ ಈ ವೇದಿಕೆ ಸಿದ್ಧವಾಗ್ತಿದೆ’ ಅಂದಿದ್ದಾರೆ ರಾಬರ್ಟ್ ಸೂತ್ರಧಾರ.
ಇದೇ ಸಂದರ್ಭ ಹುಬ್ಬಳ್ಳಿ ಜೊತೆ ತಮ್ಮ ಬಾಲ್ಯದ ನಂಟನ್ನೂ ಬಿಚ್ಚಿಟ್ಟ ತರುಣ್ ಸುಧೀರ್, ತಮಗೆ ಹುಬ್ಬಳ್ಳಿಯ ಮೂಲೆ ಮೂಲೆಯೂ ಇವತ್ತಿಗೂ ಗೊತ್ತು ಎಂದಿದ್ದಾರೆ. ಅಷ್ಟೇ ಅಲ್ಲದೇ, ಹುಬ್ಬಳ್ಳಿ ಮೇಲಿನ ಪ್ರೀತಿಯಿಂದಲೇ ತಾವು ಕೆಲಸ ಮಾಡಿರುವ ಎಲ್ಲಾ ಸಿನಿಮಾದಲ್ಲೂ ಹುಬ್ಬಳ್ಳಿ ನೆಲದ ಯಾವುದಾದರೂ ಫ್ಲೇವರ್ ಬಳಸಿಕೊಂಡಿರೋದರ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.
‘ನಾನು ಬಾಲ್ಯದಲ್ಲಿ ನನ್ನ ಹೆಚ್ಚಿನ ಸಮಯವನ್ನ ಇಲ್ಲೇ ಹುಬ್ಬಳ್ಳಿಯಲ್ಲಿ ಕಳೆದಿದ್ದು. ಸೋ ನೀವು ಎಲ್ಲಿ ಕರೆದುಕೊಂಡು ಹೋಗ್ಬೇಕು ಅಂದ್ರು ನಾನು ಸಲೀಸಾಗಿ ಕರೆದುಕೊಂಡು ಹೋಗ್ತೀನಿ. ನಮ್ಮ ಅಜ್ಜಿ ಮನೆ ಇಲ್ಲೇ. ಈಗಲೂ ಅವರೆಲ್ಲಾ ಇಲ್ಲೇ ಇದ್ದಾರೆ. ಹುಬ್ಬಳ್ಳಿ ನನಗೆ ಖಂಡಿತವಾಗ್ಲೂ ಹೊಸತಲ್ಲ. ನಾನು ಅದಕ್ಕೆ ನನ್ನ ಸಿನಿಮಾಗಳಲ್ಲಿ ಉತ್ತರ ಕರ್ನಾಟಕ್ಕೆ ಸಂಬಂಧ ಪಟ್ಟಂತೆ ಏನಾದರೂ ಒಂದು ಮಾಡಿರ್ತೀನಿ. ಱಂಬೋ ಸಿನಿಮಾದಿಂದ ರಾಬರ್ಟ್ವರೆಗೂ. ಅದೊಂಥರ ವಿಶೇಷವಾದ ಪ್ರೀತಿ ನನಗೆ.’
ತರುಣ್ ಸುಧೀರ್, ನಟ-ನಿರ್ದೇಶಕ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post