ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಕೋರ್ಟಿಗೆ ಬರೋಬ್ಬರಿ 2,900ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಎನ್ಡಿಪಿಎಸ್ ಕೋರ್ಟಿಗೆ ಸಿಸಿಬಿ ತನಿಖಾಧಿಕಾರಿ ಪುನೀತ್ ಅವರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, 25 ಮಂದಿಯ ವಿರುದ್ಧ ಪೊಲೀಸರು 180 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿ 5 ವಾಲ್ಯಮ್ಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಇನ್ನು ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಬೇಕಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಹೆಸರನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿದ್ದಾರೆ. ಪ್ರಕರಣದಲ್ಲಿ ರಾಗಿಣಿ, ಸಂಜನಾ, ರಾಹುಲ್, ವಿರೇನ್ ಖನ್ನಾ, ಆದಿತ್ಯಾ ಆಳ್ವಾ, ವೈಭವ್ ಸೇರಿದಂತೆ ಆಫ್ರಿಕಾ ಮೂಲದ 4 ಮಂದಿಯ ಆರೋಪಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ.
ಸದ್ಯ ಪ್ರಕರಣ ಪ್ರಮುಖ ಆರೋಪಿಗಳು ಜಾಮೀನು ಮೇಲೆ ಹೊರ ಬಂದಿದ್ದಾರೆ. ಚಾರ್ಜ್ ಶೀಟ್ನಲ್ಲಿ ಆರೋಪಿಗಳ ಹೇಳಿಕೆಗಳೇ ಪ್ರಮುಖ ಸಾಕ್ಷಿಗಳಾಗಿದ್ದು, ಒಂದು ಕಡೆ ಡ್ರಗ್ಸ್ ತೆಗೆದುಕೊಳ್ಳುವುದರೊಂದಿಗೆ, ಡ್ರಗ್ಸ್ ಪೆಡ್ಲಿಂಗ್ ಕೂಡ ಮಾಡಿದ್ದಾರೆ. ತಾವು ಖರೀದಿಸಿ ಬೇರೆಯವರಿಗೆ ನೀಡಿದನ್ನ ತೋರಿಸಿದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಚಾರ್ಜ್ ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೇ ಕೆಲವರು ಕೃತ್ಯಕ್ಕೆ ಸಹಾಯ ನೀಡಿ ಶೆಲ್ಟರ್ ನೀಡಿ ಹಣ ಹೂಡಿಕೆ ಮಾಡಿರುವ ಅಂಶಗಳ ಬಗ್ಗೆಯೂ ಸಿಸಿಬಿ ಪೊಲೀಸರು ಉಲ್ಲೇಖಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post