ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಬಹು ನಿರೀಕ್ಷಿತ ‘ಯುವರತ್ನ’ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ. ಗುರು-ಶಿಷ್ಯರ ಬಾಂಧವ್ಯದ ಬಗ್ಗೆ ಸಾರಿ ಹೇಳುವ ಹಾಡು ಇದಾಗಿದ್ದು, ತುಂಬಾ ದಿನಗಳಿಂದ ಬಹಳ ನಿರೀಕ್ಷೆಯನ್ನ ಹೆಚ್ಚಿಸಿತ್ತು. ಇದೀಗ ಹಾಡು ಬಿಡುಗಡೆಯಾಗಿದ್ದು, ಮತ್ತೆ ಪುನೀತ್ ರಾಜ್ಕುಮಾರ್ಗೆ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿರೋದಕ್ಕೆ ಅಭಿಮಾನಿಗಳು ಖುಷಿ ವ್ಯಕ್ತ ಪಡಿಸುತ್ತಿದ್ದಾರೆ. ಇದಕ್ಕಿಂತಲೂ ವಿಶೇಷವಾಗಿರೋದು, ಈ ಹಾಡಿನಲ್ಲಿ ಪುನೀತ್ ಹೇರ್ಸ್ಟೈಲ್. ಹೌದು.. ತಮ್ಮ ಮೊದಲ ಸಿನಿಮಾದ ಹೇರ್ಸ್ಟೈಲ್ನಲ್ಲಿ ಮತ್ತೊಮ್ಮೆ ಪುನೀತ್ ಕಾಣಿಸಿಕೊಂಡಿದ್ದಾರೆ.
ತಮ್ಮ ಮೊದಲ ಸಿನಿಮಾ ‘ಅಪ್ಪು’ ಚಿತ್ರದಲ್ಲಿ ಪುನೀತ್ ಇದೇ ಹೇರ್ಸ್ಟೈಲ್ನಿಂದ ಅಭಿಮಾನಿಗಳಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದರು. ಸದ್ಯ ಪುನೀತ್ರನ್ನ ಇಷ್ಟು ವರ್ಷಗಳ ನಂತರ ಮತ್ತೆ ಆ ಲುಕ್ನಲ್ಲಿ ನೋಡೋದಂದ್ರೆ ಫ್ಯಾನ್ಸ್ಗೆ ಥ್ರಿಲ್ ಆಗ್ತಿದೆ. “ಪಾಠಶಾಲಾ” ಅನ್ನೋ ಹಾಡು ಇದಾಗಿದ್ದು, ಈ ಹಿಂದೆಯೇ ಈ ಹಾಡನ್ನ ಬಿಡುಗಡೆ ಮಾಡುವ ಪ್ಲ್ಯಾನ್ ಚಿತ್ರತಂಡ ಹಾಕಿಕೊಂಡಿತ್ತು. ಕಾರಣಾಂತರಗಳಿಂದ ತಡವಾಗಿತ್ತು. ವಿಜಯ್ ಪ್ರಕಾಶ್ ಈ ಹಾಡಿಗೆ ಧ್ವನಿಯಾಗಿದ್ದು, ನಿರ್ದೇಶಕ ಸಂತೋಷ್ ಆನಂದ್ರಾಮ್ ಸಾಹಿತ್ಯ ರಚಿಸಿದ್ದಾರೆ. ಒಂದಷ್ಟು ಪೇಂಟಿಂಗ್ಗಳ ಮೂಲಕ ದೃಶ್ಯಗಳನ್ನ ವಿವರಿಸುವ ಪ್ರಯತ್ನ ಚಿತ್ರತಂಡ ಮಾಡಿದೆ.
ಹಾಡಿನಲ್ಲಿ ಪುನೀತ್ ರಾಜ್ಕುಮಾರ್ ಜೊತೆಗೆ ಖ್ಯಾತ ನಟ ಪ್ರಕಾಶ್ ರೈ ಕೂಡ ಕಾಣಿಸಿಕೊಳ್ತಿದ್ದಾರೆ. ಬಹುಶಃ ಸ್ಟೂಡೆಂಟ್ ಪುನೀತ್ಗೆ ಗುರುವಾಗಿ ಪ್ರಕಾಶ್ ರೈ ನಟಿಸಿದ್ದಾರೆ ಅಂತ ಹೇಳಬಹುದು. ಕಥೆಯ ಆಳ ತಿಳಿಯಬೇಕಂದ್ರೆ, ಇನ್ನೇನಿದ್ರು ಏಪ್ರಿಲ್ 1ರವರೆಗೂ ‘ಯುವರತ್ನ’ನ ಬರುವಿಕೆಗೆ ಕಾಯಲೇಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post