ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ‘ರಾಬರ್ಟ್’ ಅಬ್ಬರ ಕರ್ನಾಟಕದಲ್ಲಿ ಬಹಳ ಜೋರಾಗಿದೆ. ಇದಕ್ಕೆ ಫೆಬ್ರವರಿ 28ರಂದು ಹುಬ್ಬಳ್ಳಿಯಲ್ಲಿ ನಡೆದ ‘ರಾಬರ್ಟ್’ ಪ್ರೀ-ರಿಲೀಸ್ ಕಾರ್ಯಕ್ರಮವೇ ಸಾಕ್ಷಿ. ಸಾಗರದಷ್ಟು ದರ್ಶನ್ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ ದರ್ಶನ ಪಡೆಯಲು ನೆರೆದಿದ್ದರು. ಇದೀಗ ‘ರಾಬರ್ಟ್’ ಹವಾ ಹತ್ತಿರದ ಆಂಧ್ರದಲ್ಲೂ ಜೋರಾಗಿರುವ ಸುಳಿವು ಸಿಕ್ಕಿದೆ.
ಹೌದು.. ಫೆಬ್ರವರಿ 26ರಂದೇ ತೆಲುಗಿನಲ್ಲಿ ‘ರಾಬರ್ಟ್’ ಪ್ರೀ-ರಿಲೀಸ್ ಕಾರ್ಯಕ್ರಮ ನಡೆದಿತ್ತು. ದರ್ಶನ್ ‘ರಾಬರ್ಟ್’ ಟ್ತೈಲರ್ ಹಾಗೂ ಹಾಡುಗಳಿಗೆ ಮನಸೋತಿದ್ದ ಆಂಧ್ರ ಜನ, ದರ್ಶನ್ರನ್ನ ನೋಡಲು ಅಪಾರ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಸೇರಿದ್ದರು. ಇದೀಗ ಆಂಧ್ರದಲ್ಲಿ ಅಲ್ಲಲ್ಲಿ ಕಂಡು ಬಂದ ‘ರಾಬರ್ಟ್’ ಸಿನಿಮಾದ ಹೋರ್ಡಿಂಗ್ಸ್ ಬಹಳ ಸುದ್ದಿಯಾಗ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post