ಕೋಲಾರ: ನಗರಸಭೆಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸಾಮಾನ್ಯ ಸಭೆಯಲ್ಲಿ ಅಂಬೇಡ್ಕರ್ ಭವನ ನವೀಕರಣಕ್ಕೆ ಹಣ ಮಂಜೂರಾತಿ ಮಾಡುವ ಕುರಿತು ನಗರಸಭೆ ಸದಸ್ಯರು ಪರಸ್ಪರ ವಾಗ್ವಾದಕ್ಕಿಳಿದಿದ್ದಾರೆ.
ಈ ಹಿಂದಿನ ಸಭೆಯಲ್ಲಿ ಸಮುದಾಯ ಭವನದ ನವೀಕರಣಕ್ಕೆ ಹಣ ಮಂಜೂರಾತಿ ಪತ್ರವನ್ನ ನೀಡಲಾಗಿತ್ತು. ಆದರೆ ಆ ನಂತರ ಅದನ್ನು ರದ್ದು ಪಡಿಸಲಾಗಿದೆ. ಈ ಸಂಬಂಧ ನಗರಸಭಾ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಅಂಬೇಟ್ಕರ್ಗೆ ಮಾಡುತ್ತಿರುವ ಅಪಮಾನ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದಸ್ಯರ ವಾಗ್ವಾದ ಕೊನೆಗೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಹಾಗೂ ಸದಸ್ಯ ಅಂಬರೀಶ್ ಕೈ ಕೈ ಮಿಲಾಯಿಸಿಕೊಳ್ಳು ಹಂತಕ್ಕೆ ತಲುಪಿದೆ. ನಂತರ ಅಲ್ಲಿದ್ದ ಇತರೆ ಸದಸ್ಯರು ಅವರನ್ನು ತಡೆದು ಸಮಾಧಾನ ಮಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post