ಬೆಂಗಳೂರು: ಸದನದ ಕಾಲಪದ ವೇಳೆ ಬಟ್ಟೆ ಬಿಚ್ಚಿ ಪ್ರತಿಭಟಿಸಲು ಮುಂದಾದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ವಿರುದ್ಧ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಗರಂ ಆದ ಪ್ರಸಂಗ ನಡೆಯಿತು.
ಏನ್ರೀ ಸಿದ್ದರಾಮಯ್ಯ ನವರೇ, ಇವ್ರು ಸದಸ್ಯರೇನ್ರೀ..? ಏನ್ರೀ ಇವ್ರು ಹೀಗೆ ನಡೆದುಕೊಳ್ತಿದ್ದಾರೆ. ಸಂಗಮೇಶ್ ಅವ್ರೇ ನಿಮ್ಮನ್ನು ಹೊರಗೆ ಹಾಕಬೇಕಾಗುತ್ತದೆ. ಇದು ರಸ್ತೆಯೇನ್ರಿ? ಅಶಿಸ್ತಿನಿಂದು ನಡೆದುಕೊಂಡು ಭದ್ರಾವತಿ ಜನತೆಗೆ ಅವಮಾನ ಮಾಡ್ತಿದ್ದೀರಿ. ಕ್ಷೇತ್ರದ ಜನರಿಗೆ ಅಗೌರವ ಮಾಡ್ತಿದ್ದೀರಿ. ಸದನದಲ್ಲಿ ಅಶಿಸ್ತಿನಿಂದು ನಡೆದುಕೊಂಡಿದ್ದೀರಿ ಎಂದು ಸ್ಪೀಕರ್ ಕಿಡಿ ಕಾರಿದರು.
ಸದನ ತಮಾಷೆ ಮಾಡಬೇಡಿ, ಭದ್ರಾವತಿ ಜನರಿಗೆ ಅಗೌರವ ಮಾಡುತ್ತ ಇದ್ದೀರಿ ಅಂತಾ ಸ್ಪೀಕರ್ ಬೇಸರ ವ್ಯಕ್ತಪಡಿಸಿದರು. ನಂತರ ಸಂಗಮೇಶ್ ಪಕ್ಕದಲ್ಲೇ ಇದ್ದ ಡಿಕೆ ಶಿವಕುಮಾರ್.. ಸಂಗಮೇಶ್ ಅವರಿಗೆ ಶರ್ಟ್ ಹಾಕಿಕೊಳ್ಳುವಂತೆ ಸೂಚನೆ ನೀಡಿದರು. ಅದರಂತೆ ಸಂಗಮೇಶ್ ಶರ್ಟ್ ಧರಿಸಿಕೊಂಡರು. ಅಂದ್ಹಾಗೆ ಇಂದು ಸದನದ ಕಲಾಪ ಆರಂಭವಾಗುತ್ತಿದ್ದಂತೆ ಒನ್ ನೇಷನ್, ಒನ್ ಎಲೆಕ್ಷನ್ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಸದನದ ಬಾವಿಗೆ ಇಳಿದು ಪ್ರತಿಭಟಿಸುತ್ತಿದ್ದಾಗ ಸಂಗಮೇಶ್ ಈ ವರ್ತನೆಗೆ ಮುಂದಾಗಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post