ಪಶ್ಚಿಮ ಬಂಗಾಳ: ಸಿಎಂ ಮಮತಾ ಬ್ಯಾನರ್ಜಿ ಮಹಾಶಿವರಾತ್ರಿಯ ದಿನವಾದ ನಾಳೆ ಟಿಎಂಸಿ ಪಕ್ಷದ ಹೊಸ ಪ್ರಣಾಳಿಕೆ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ನಂದಿ ಗ್ರಾಮದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಹಿಂದೂ ಎನ್ನುವ ಟ್ರಂಪ್ ಕಾರ್ಡ್ ಪ್ರಯೋಗ ಮಾಡುತ್ತಿರುವ ದಿದಿ ನಾಳೆ ಅದೂ ಶಿವರಾತ್ರಿಯ ದಿನವೇ ತಮ್ಮ ಹೊಸಾ ಪ್ರಣಾಳಿಕೆಯನ್ನ ಬಿಡುಗಡೆ ಮಾಡುತ್ತಿದ್ದಾರೆ.
ಅಭಿವೃದ್ಧಿಯ ಅಜೆಂಡಾ ಜೊತೆ ಹಿಂದು ಪ್ಲೇ ಕಾರ್ಡ್ ಪ್ಲೇ ಮಾಡುತ್ತಿರೋದು ನೋಡಿದ್ರೆ ಈ ಬಾರಿಯ ಪ್ರಣಾಳಿಕೆಯಲ್ಲೂ ಭಾರೀ ನಿರೀಕ್ಷೆ ಮೂಡಿಸಿದೆ. ನೂತನ ಪ್ರಣಾಳಿಕೆಯ ಮೂಲಕ ಮಮತಾ ಯಾವರೀತಿ ಬಿಜೆಪಿಗೆ ಟಕ್ಕರ್ ನೀಡುತ್ತಾರೆ ಅನ್ನೋದು ಕುತೂಹಲ ಸೃಷ್ಟಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post