ಪಶ್ಚಿಮ ಬಂಗಾಳ: ಇಂದು ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಟಕ್ಕರ್ ನೀಡಲು ಬಿಜೆಪಿ ಅಭ್ಯರ್ಥಿ, ದೀದಿಯ ಎಡಗೈ ಭಂಟನಾಗಿದ್ದ ಸುವೆಂದು ಅಧಿಕಾರಿ ಮುಂದಾಗಿದ್ದಾರೆ.
ಮೊನ್ನೆ ಪಾದಯಾತ್ರೆ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದ ದೀದಿ ನಂತರ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಅವರ ಎಡಗೈ ಭಂಟನಾಗಿದ್ದ ಸುವೇಂದು ಅಧಿಕಾರಿ ಅವರಿಗೆ ಟಕ್ಕರ್ ನೀಡೋ ರೀತಿಯಲ್ಲಿ ಇಂದು ಪಾದಯಾತ್ರೆ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಮೊದಲಿಗೆ ದೇವರ ದರ್ಶನ ಮಾಡಿ ಪಾದಯಾತ್ರೆ ಮೂಲಕ ಇಂದೇ ನಂದಿ ಗ್ರಾಮದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್, ಸ್ಮೃತಿ ಇರಾನಿ ಸೇರಿದಂತೆ ಹಲವು ಕೇಂದ್ರ ಮತ್ತು ರಾಜ್ಯನಾಯಕರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post