ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಆರೋಪ ಕೇಸ್ ಸಂಬಂಧ ಬಿಗ್ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ಇಂದು ಗೋವಿಂದಪುರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಡ್ರಗ್ಸ್ ಲಿಂಕ್ ಆರೋಪ ಪ್ರಕರಣ ಇಡೀ ಸ್ಯಾಂಡಲ್ವುಡ್ಗೆ ಇರಿಸು, ಮುರಿಸು ಉಂಟು ಮಾಡಿತ್ತು. ನಟಿ ರಾಗಿಣಿ ಹಾಗೂ ಜಂಜನಾಗೆ ಜಾಮೀನು ಸಿಕ್ಕ ನಂತರ ಪ್ರಕರಣ ಸಂಪೂರ್ಣ ತಣ್ಣಗಾದಂತಾಗಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಈ ಪ್ರಕರಣ ಹೊಸ ಆಯಾಮವನ್ನ ಪಡೆದುಕೊಂಡಿದೆ. ಡ್ರಗ್ಸ್ ಪೆಡ್ಲರ್ ಸಂಪರ್ಕದಲ್ಲಿರುವ ಆರೋಪದ ಮೇಲೆ ಬಿಗ್ಬಾಸ್ ಸ್ಪರ್ಧಿ ಮಸ್ತಾನ್ ಮತ್ತು ನಿರ್ಮಾಪಕ ಶಂಕರೇಗೌಡರ ಮನೆ ಶೋಧ ನಡೆಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಈ ವೇಳೆ ಅವರು ಪಾರ್ಟಿಗಳನ್ನ ಆಯೋಜಿಸುತ್ತಿದ್ದ ಬಗ್ಗೆ ಅಲ್ಲಿಗೆ ಹಲವು ನಟ ನಟಿಯರು ಹಾಜರಾಗುತ್ತಿದ್ದ ಬಗ್ಗೆ ಮಾಹಿತಿಗಳು ತಿಳಿದು ಬಂದವು. ಈ ಸಂಬಂಧ ಸದ್ಯ ತೆಲುಗು ನಟ ಸೇರಿ ಐವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ನೊಟಿಸ್ ನೀಡಲಾಗಿದೆ. ಪೊಲೀಸರಿಂದ ಮತ್ತೆ ಬುಲಾವ್ ಬಂದಿದ್ದ ಹಿನ್ನೆಲೆಯಲ್ಲಿ ಮಸ್ತಾನ್ ಇಂದು ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post