ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಟಾಲಿವುಡ್ ನಟ ತನೀಶ್ಗೆ ಮತ್ತೆ ನೋಟಿಸ್ ನೀಡುವ ಸಾಧ್ಯತೆಯಿದೆ.
ಪ್ರಕರಣ ಸಂಬಂಧ ನಟ ತನೀಶ್, ಸಂದೀಪ್ ರೆಡ್ಡಿ, ಕಲಹರೆಡ್ಡಿ, ಉದ್ಯಮಿ ರತನ್ ಸೇರಿ ಐವರಿಗೆ ಇಂದು 10:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಗೋವಿಂದಪುರ ಪೊಲೀಸರು ನೋಟಿಸ್ ನೀಡಿದ್ದರು. ಅಧಿಕಾರಿಗಳ ತಂಡ ಹೈದಾರಾಬಾದ್ಗೆ ತೆರಳಿ ನೋಟಿಸ್ ಕೊಟ್ಟಿದ್ದರೂ ಸಹ ಆರೋಪಿಗಳು ಈವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಈ ಐವರಿಗೆ ಮತ್ತೆ ನೊಟೀಸ್ ನೀಡುವ ಸಾಧ್ಯತೆಗಳಿದೆ ಅಂತ ತಿಳಿದುಬಂದಿದೆ.
ಡ್ರಗ್ಸ್ ಕೇಸ್ನಲ್ಲಿ ಬಿಗ್ಬಾಸ್ ಸ್ಪರ್ಧಿ ಮಸ್ತಾನ್ ಹಾಗೂ ನಿರ್ಮಾಪಕ ಶಂಕರೇಗೌಡರ ಹೆಸರು ಕೇಳಿಬಂದಿದ್ದು, ಶಂಕರೇಗೌಡ ತಮ್ಮ ನಿವಾಸದಲ್ಲಿ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಆರೋಪಿಗಳು ಭಾಗವಹಿಸುತ್ತಿದ್ದರು ಎನ್ನಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post