ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ನಲ್ಲಿ ಈಗ ರಾಬರ್ಟ್ನದ್ದೆ ಕಾರುಬಾರು. ನೋಡನೋಡುತ್ತಿದಂತೆ ಕೋಟಿ ಕೋಟಿ ರೂಪಾಯಿ ಕಮಾಯಿ ಮಾಡುತ್ತಿರುವ ರಾಬರ್ಟ್ ಇದೀಗ ನೂರು ಕೋಟಿ ಕ್ಲಬ್ನ ಸದಸ್ಯನಾಗಲು ಹೊರಟಿದೆ.
ಸುಮ್ನೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಬಾಕ್ಸ್ ಆಫೀಸ್ ಸುಲ್ತಾನ ಎಂದು ಕರೆಯೋದಿಲ್ಲ. ಖಾಲಿ ಹೊಡೆಯುತ್ತಿದ ಚಿತ್ರರಂಗಕ್ಕೆ ಒಂದು ದೊಡ್ಡ ಭರವಸೆಯನ್ನ ನೀಡುತ್ತಿದೆ ರಾಬರ್ಟ್ ಚಿತ್ರ. ತೆರೆಕಂಡ ಚಿತ್ರಮಂದಿಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿರುವ ರಾಬರ್ಟ್, ಒಂದೇ ವಾರದಲ್ಲಿ ದಾಖಲೆಯ ಕಲೆಕ್ಷನ್ ತನ್ನ ಜೇಬಿಗೆ ಇಳಿಸಿಕೊಂಡಿದೆ.
ಮಾರ್ಚ್ 11ರಂದು ಮಹಾಶಿವರಾತ್ರಿ ಹಬ್ಬದ ಪ್ರಯಕ್ತ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಾಬರ್ಟ್ ಸಿನಿಮಾ ತೆರೆಕಂಡಿತು. ಮೊದಲ ದಿನವೇ ದಾಖಲೆಯ ನಾಗಾಲೋಟವನ್ನ ಶುರುಹಚ್ಚಿಕೊಂಡ ರಾಬರ್ಟ್ ಕೋಟಿ ಕೋಟಿ ಹಣ್ಣವನ್ನ ಕಲೆಕ್ಷನ್ ಮಾಡಿತ್ತು. ಈಗ ರಾಬರ್ಟ್ ಸಿನಿಮಾದ ಒಂದು ವಾರದ ಕಲೆಕ್ಷನ್ ರಿಪೋರ್ಟ್ ಹೊರಬಂದಿದೆ. ಸ್ವತಃ ರಾಬರ್ಟ್ ತಂಡವೇ ಹೊರ ಹಾಕಿರೋ ರಿಪೋರ್ಟ್ ಪ್ರಕಾರ ಭರ್ಜರಿ ಕಲೆಕ್ಷನ್ ಮಾಡಿದೆ ಸಿನಿಮಾ.
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಆತ್ಮೀಯ ಬಳಗದಿಂದ ಸಿಕ್ಕಿರೋ ಮಾಹಿತಿ ಪ್ರಕಾರ ರಾಬರ್ಟ್ ಸಿನಿಮಾ ಒಂದು ವಾರದಲ್ಲಿ 563 ಸಿಂಗಲ್ ಸ್ಕ್ರೀನ್ಸ್ ಹಾಗೂ 100 ಮಲ್ಟಿಪ್ಲೆಕ್ಸ್ ಸ್ಕ್ರೀನ್ಗಳಲ್ಲಿ ಪ್ರದರ್ಶನವಾಗಿರುವ ಲೆಕ್ಕಚಾರದ ಮೇರೆಗೆ 78.36 ಕೋಟಿ ರೂಪಾಯಿ ಸಂಪಾದಿಸಿದೆ ಎನ್ನಲಾಗಿದೆ.
ಚಿತ್ರತಂಡದ ಅನಾಲಿಸಿಸ್ ಪ್ರಕಾರ ಒಂದು ವಾರದಲ್ಲಿ 78.36 ಕೋಟಿ ರೂಪಾಯಿ ಕಲೆಕ್ಷನ್ ಆಗಿರೋದು ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಎನ್ನಲಾಗುತ್ತಿದೆ. ರಾಬರ್ಟ್ ಕಲೆಕ್ಷನ್ ವೇಗವನ್ನ ನೋಡ್ತಿದ್ರೆ ಎರಡು ವಾರ ಕಳೆಯುವಷ್ಟರಲ್ಲಿ ನೂರು ಕೋಟಿ ಸಂಪಾದಿಸುವ ಸಂಭವ ಗೋಚರಿಸುತ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post