ಬೆಂಗಳೂರು: ಮಾಜಿ ಸಚಿವರ ವಿರುದ್ಧ CD ಕೇಸ್ಗೆ ಸಂಬಂಧಿಸಿದಂತೆ ಇಂದು ಮಹತ್ವದ ಬೆಳವಣಿಗೆಗಳು ನಡೆದಿವೆ. ಸಂತ್ರಸ್ತ ಯುವತಿ ತಮ್ಮ ವಕೀಲರ ಮೂಲಕ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ನೀಡ್ತಿದ್ದಂತೆ, ಮತ್ತೊಂದು ಆಡಿಯೋ ಲಭ್ಯವಾಗಿದೆ.
ವಿಡಿಯೋ ಬಹಿರಂಗ ಆದ ಬಳಿಕ ಸಂತ್ರಸ್ತ ಯುವತಿ ತಮ್ಮ ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ಧೈರ್ಯ ತುಂಬಿದ್ದಾಳೆ ಎನ್ನಲಾಗಿರುವ ಆಡಿಯೋ ಇದಾಗಿದೆ. ಅಲ್ಲದೇ ನಾನು ಡಿಕೆ ಶಿವಕುಮಾರ್ ಮನೆಯ ಬಳಿ ಇದ್ದೇನೆ. ಅವರು ಭೇಟಿ ಮಾಡುತ್ತಾರೆ. ಎಂದೂ ಸಹ ಹೇಳಿದ್ದು, ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರನ್ನೂ ಪ್ರಸ್ತಾಪ ಮಾಡಿದ್ದಾಳೆ.
ಸಂತ್ರಸ್ತ ಯುವತಿಯದ್ದು ಎನ್ನಲಾಗಿರುವ ಆಡಿಯೋದಲ್ಲಿ ತನ್ನ ತಮ್ಮನ ಜೊತೆ ಮಾತನಾಡುತ್ತ.. ನೀನಾದ್ರೂ ನನ್ ನಂಬು. ಯಾರೂ ಕೂಡ ನನ್ನ ನಂಬುತ್ತಿಲ್ಲ, ಎಲ್ಲರೂ ಡೌಟ್ ಪಡ್ತಿದ್ದಾರೆ. ವಿಡಿಯೋದಲ್ಲಿರೋದು ನಾನಲ್ಲ, ಗ್ರಾಫ್ರಿಕ್ಸ್ನಿಂದ ಹಾಗೆ ಮಾಡಿ, ನನ್ನ ಧ್ವನಿಯನ್ನ ಮಾಡ್ಯುಲೇಷನ್ ಮಾಡಿದ್ದಾರೆ. ನೀನಾದರೂ ನನ್ನನ್ನ ನಂಬು.
ನಿನ್ನ ಮೇಲೆ ಆಣೆಗೂ ಅದು ನಾನಲ್ಲ. ನಾನು ನಂಬುವ ಕೃಷ್ಣನ ಮೇಲೆ ಆಣೆಗೂ ನಾನು ಅವಳಲ್ಲ ಎಂದು ಹೇಳಿದ್ದಾಳೆ.
ನ್ಯೂಸ್ನಲ್ಲಿ ತೋರಿಸುತ್ತಿರೋದೆಲ್ಲ ಗ್ರಾಫೀಕ್ಸ್ ಇದೆ ಚಿನ್ನಿ. ನಾನ್ಯಾಕೆ ಅಂತಾ ಕೆಲಸಕ್ಕೆ ಹೋಗುತ್ತೇನೆ ನೀನೇ ಹೇಳು ಚಿನ್ನಿ. ಸ್ವಲ್ಪ ನೀನೇ ಯೋಚನೆ ಮಾಡು ಅಂತಾ ಯುವತಿ ಹೇಳಿದಾಗ, ಅದು ಎಲ್ಲಾ ನಿಂದೇ ವಾಯ್ಸ್ ಐತಲ್ಲಾ..? ಆಡಿಯೋದಲ್ಲಿ, ಬಿಯರ್ ಕುಡಿತೀಯಾ ಅದು ಕುಡಿತೀಯಾ ಎಲ್ಲಾ ಅಂತಾ. ಲೇ ಅದು ಒಲ್ಲೆ ಅಪ್ಪಾ ಅದು ನಾ ವಾಯ್ಸ್, ಹುಡುಗಿ ಮಾತಾಡಿರೋದು. ಹುಡುಗಿ ಮಾತಾಡಿರೋದು ವಿಡಿಯೋ ಏನ್ ನಾನ್ ಕಳಿಸ್ತೀನಿ ಇರು ಎಂದಿದ್ದಾಳೆ.
ಅದಾದ ನಂತರ ತನ್ನ ಅಮ್ಮನ ಜೊತೆ ಮಾತನಾಡಿ, ಅವ್ವ ಅದು ನಾನಲ್ಲ, ನೀನಾದರೂ ನನ್ನ ನಂಬು. ನಿನ್ನ ಕಾಲಿಗೆ ಬೀಳ್ತೀನಿ. ಧೈರ್ಯದಿಂದ ಇರಿ, ನಾನು ಎಲ್ಲವನ್ನೂ ಕ್ಲೀಯರ್ ಮಾಡಿಕೊಂಡು ಬರ್ತೀನಿ ಎಂದಿರುವ ಆಡಿಯೋ ಇದೀಗ ಎಲ್ಲಡೆ ವೈರಲ್ ಆಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post