ಬಾಲಿವುಡ್ ನಟಿ ಆಲಯಾ ಭಟ್ ಕೊರೊನಾ ಸೋಂಕಿಗೀಡಾಗಿದ್ದಾರೆ. ಈ ಬಗ್ಗೆ ಸ್ವತಃ ಆಲಿಯಾ ಕಳೆದ ರಾತ್ರಿ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.
ನನಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿದೆ. ಕೂಡಲೇ ನಾನು ಐಸೋಲೇಟ್ ಆಗಿದ್ದು(ಪ್ರತ್ಯೇಕವಾಗಿ ಇದ್ದು), ಹೋಂ ಕ್ವಾರಂಟೀನ್ನಲ್ಲಿ ಇರಲಿದ್ದೇನೆ. ನಮ್ಮ ವೈದ್ಯರು ಸೂಚಿಸಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನ ನಾನು ಅನುಸರಿಸುತ್ತಿದ್ದೇನೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಆಭಾರಿ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ, ಎಚ್ಚರಿಕೆ ವಹಿಸಿ ಎಂದು ಆಲಿಯಾ ಬರೆದುಕೊಂಡಿದ್ದಾರೆ.
ಅಂದ್ಹಾಗೆ ಪ್ರಸ್ತುತ ಆಲಿಯಾ ಭಟ್, ಮುಂಬೈನಲ್ಲಿ ಸಂಜಯ್ ಲೀಲಾ ಭನ್ಸಾಲಿಯ ಬಹುನಿರೀಕ್ಷಿತ ಗಂಗೂಬಾಯಿ ಖಾತಿಯಾವಾಡಿ ಚಿತ್ರದ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದರು. ಮಾರ್ಚ್ ಆರಂಭದಲ್ಲಿ, ಭನ್ಸಾಲಿ ಅವರಿಗೆ ಸೋಂಕು ತಗುಲಿತ್ತು. ಕೆಲವು ವಾರಗಳಲ್ಲಿ ಅವರು ಚೇತರಿಸಿಕೊಂಡಿದ್ದರು. ಅಲ್ಲದೆ ಆಲಿಯಾ ಭಟ್ ಬಾಯ್ಫ್ರೆಂಡ್, ನಟ ರಣಬೀರ್ ಕಪೂರ್ಗೂ ಸಹ ಕಳೆದ ತಿಂಗಳು ಕೊರೊನಾ ತಗುಲಿರೋದು ದೃಢವಾಗಿತ್ತು. ಆಗ ಆಲಿಯಾ ಕೆಲ ದಿನಗಳು ಕ್ವಾರಂಟೀನ್ನಲ್ಲಿದ್ದು, ಬಳಿಕ ಟೆಸ್ಟ್ ಮಾಡಿಸಿದಾಗ ತಮಗೆ ಕೊರೊನಾ ನೆಗೆಟಿವ್ ಎಂದು ವರದಿ ಬಂದಿರೋದಾಗಿ ತಿಳಿಸಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post