ದಿವ್ಯಾ ಉರುಡುಗ ಹಾಗೂ ಅರವಿಂದ್ ನಡುವೆ ಉತ್ತಮ ಬಾಂಧವ್ಯ ಇದೇ ಅನ್ನೋದು ಎಲ್ಲರಿಗೂ ಗೊತ್ತು. ಇವರಿಬ್ಬರು ಜೋಡಿ ಆದ್ರೆ ಚೆನ್ನಾಗಿರುತ್ತೆ ಅಂತಾ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಬೇರೊಂದು ರೀತಿ ಹೇಳಿಕೆ ನೀಡಿರುವ ಪ್ರಶಾಂತ್ ಸಂಬರಗಿ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ತಾಪ ತುಂಬಾನೆ ಜೋರಾಗಿದೆ. ಎರಡು ತಂಡಗಳು ಕೂಡಾ ಟಫ್ ಫೈಟ್ ಕೊಡುತ್ತಿದ್ದಾರೆ. ಈ ಮಧ್ಯೆ ಪುಷ್ ಆ್ಯಂಡ್ ಪುಲ್ ಟಾಸ್ಕ್ನಲ್ಲಿ ಈ ಎರಡರಲ್ಲಿ ಯಾವುದು ಬೇಕೆಂದು ಎರಡೂ ತಂಡಗಳು ಡಿಸೈಡ್ ಮಾಡುತ್ತವೆ. ಪ್ರಶಾಂತ್ ಸಂಬರಗಿ ಈ ಆಟದಲ್ಲಿ ರೂಲ್ಸ್ ಬ್ರೇಕ್ ಮಾಡಿದ್ದಾರೆ ಇದನ್ನು ಕಂಡ ಜಾತ್ರೆ ಗ್ಯಾಂಗ್ ಕ್ಯಾಪ್ಟನ್ ಶುಭಪೂಂಜಾ ಪ್ರಶಾಂತ್ ಅವರನ್ನು ಔಟ್ ಎಂದು ಹೇಳ್ತಾರೆ. ಅದಕ್ಕೂ ಮುಂಚೆ ಪ್ರಶಾಂತ್ ಹಾಗೂ ಅರವಿಂದ್ ನಡುವೆ ಮಾತಿನ ಚಕಮಕಿ ನಡೆಯುತ್ತಿರುತ್ತದೆ, ಇದೇ ವೇಳೆ ಪ್ರಶಾಂತ್ ಔಟ್ ಎಂದು ಕ್ಯಾಪ್ಟನ್ ಹೇಳಿದ್ದನ್ನ ಕೇಳಿದ ಸಂಬರ್ಗಿಗೆ ಕೋಪ ಬಂದು ಅರವಿಂದ್ಗೆ ಬೈದಿದ್ದಾರೆ. ಅಷ್ಟು ಮಾತ್ರವಲ್ಲ ನಿನ್ನ ಗರ್ಲ್ ಫ್ರೆಂಡ್ ಕೈ ಹಿಡಿದಿದ್ದಕ್ಕಾ ತುಂಬಾ ಬೇಜಾರಾಗಿದ್ದು ಅಂತಾ ಹೇಳ್ತಾರೆ.
ಅದಕ್ಕೆ ತಕ್ಷಣ ರೇಜ್ ಆದ ದಿವ್ಯಾ ಉರುಡುಗಾ ನೆಟ್ಟಗೆ ಮಾತಾಡಿ ಎಂದಿದ್ದಾರೆ. ರಾಜೀವ್ ಕೂಡಾ ಪ್ರಶಾಂತ್ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸ್ತಾರೆ. ಅರವಿಂದ್ಗೆ ಬೇಕಾದರೆ ಹೇಳು ಆದರೆ ಬೇರೆ ಹುಡುಗಿನ ಮಧ್ಯ ತರ್ಬೇಡ ಎಂದು ಹೇಳಿದ್ದಾರೆ. ಟಾಸ್ಕ್ ಮುಗಿದ ಮೇಲು ಇದೇ ವಿಷಯಕ್ಕೆ ದಿವ್ಯಾ ಉರುಡುಗಾ ಹಾಗೂ ಪ್ರಶಾಂತ್ ಸಂಬರಗಿ ನಡುವೆ ವಾದ- ಪ್ರತಿವಾದ ನಡಿದಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post