ಗಡಿಗೋಪುರ ಟಾಸ್ಕ್ನಲ್ಲಿ ವಿಜೇತರಾದ ಜಾತ್ರೆ ಗ್ಯಾಂಗ್ ತಂಡಕ್ಕೆ ಬಿಗ್ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ನೀಡಿದ್ದರು. ಆ ಟಾಸ್ಕ್ನಲ್ಲಿ ಸದಸ್ಯರು ನೀಡಲಾಗಿರೋ ಪಟ್ಟಿಯಾ ಒಂದು ಬದಿಯಲ್ಲಿ ಹಿಡಿಕೆಯನ್ನು ಹಿಡಿದುಕೊಂಡು ಮತ್ತೊಂದು ಬದಿಯಲ್ಲಿ ನೀಡಿರುವ ಪ್ಲೇಟ್ ಹಾಗು ಕಪ್ಪನ್ನ ಜೋಡಿಸಬೇಕಿತ್ತು.
ನೀಡಿದ್ದ ಎಲ್ಲಾ ಕಪ್ ಹಾಗೂ ಪ್ಲೇಟ್ಗಳನ್ನು ಒಂದರ ಮೇಲೊಂದು ಜೋಡಿಸಿ ಕೊನೆಯವರೆಗೂ ಬೀಳಿಸದಂತೆ ಯಾರು ಹಿಡಿದುಕೊಳ್ಳುತ್ತಾರೊ ಅವರು ವಿಜೇತರಾಗುತ್ತಾರೆ. ವಿಜೇತರಾದವರು ಈ ವಾರದ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗುತ್ತಾರೆ. ಈ ಟಾಸ್ಕ್ನಲ್ಲಿ ಶುಭಪೂಂಜಾ, ನಿಧಿ ಸುಬ್ಬಯ್ಯ, ರಘುಗೌಡ, ಲ್ಯಾಗ ಮಂಜು, ವೈಷ್ಣವಿ ಹಾಗೂ ಪ್ರಶಾಂತ್ ಸಂಬರಗಿ ಭಾಗವಹಿಸಿದ್ದರು. ಮೊದಲಿಗೆ ರಘು ಕಪ್ ಕೆಳಗೆ ಬೀಳಿಸಿ ಟಾಸ್ಕ್ನಿಂದ ಔಟ್ ಆಗ್ತಾರೆ, ಬಳಿಕ ಒಬ್ಬೊಬ್ಬರಾಗಿ ಔಟ್ ಆಗ್ತಾರೆ. ಕೊನೆಯಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಲ್ಯಾಗ್ ಮಂಜು ಅವರ ನಡುವೆ ಟಫ್ ಫೈಟ್ ನಡೆದು ಲ್ಯಾಗ್ ಮಂಜು ವಿಜೇತರಾಗಿ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಬಳಿಕ ಲ್ಯಾಗ್ ಮಂಜು ಅವರ ಮನೆಯಿಂದ ಬಂದ ಆಡಿಯೋ ಕೇಳಿ ಫುಲ್ ಖುಷ್ ಆಗಿದ್ದಾರೆ. ಆದ್ರೆ, ವಿಶ್ವನಾಥ್ ಹಾಗೂ ರಾಜೀವ್ ಈ ವೇಳೆ ಭಾವುಕರಾದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post