ಬೆಂಗಳೂರು: ಡ್ರಗ್ಸ್ ಬಳಕೆ ಹಾಗೂ ಪೂರೈಕೆ ಆರೋಪ ಪ್ರಕರಣ ಸಂಬಂಧ ಸ್ಯಾಂಡಲ್ವುಡ್ನ ಇಬ್ಬರು ನಟರು ಹಾಗೂ ಓರ್ವ ಬಾಲಿವುಡ್ ನಟಿಗೆ ಶೀಘ್ರದಲ್ಲೇ ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.
ಗೋವಿಂದಪುರ ಪೊಲೀಸರು ನಟ ನಟಿಯರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ. ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿರೋ ಇಬ್ಬರು ನಟರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಡ್ರಗ್ ಪೆಡ್ಲರ್ ಜಾನ್, ಫಯೂಮ್ ಹಾಗೂ ಇತರೆ ವಿದೇಶಿ ಪೆಡ್ಲರ್ಗಳಿಂದ ಈ ನಟರು ಡ್ರಗ್ಸ್ ಪಡೆದುಕೊಂಡಿರೋ ಆರೋಪ ಕೇಳಿಬಂದಿದೆ. ತಮ್ಮ ಸಿನಿಮಾ ಫ್ಲಾಪ್ ಆದ್ರೂ ಬೆಂಗಳೂರಲ್ಲಿ ಬಾಲಿವುಡ್ ನಟಿಯ ಜೊತೆ ಲೇಟ್ ನೈಟ್ ಪಾರ್ಟಿ ನಡೆಸಿದ್ದರು ಎನ್ನಲಾಗಿದೆ.
ಸಿನಿಮಾ ಡಿಸ್ಕಷನ್ ಹೆಸರಲ್ಲೇ ಲೇಟ್ ನೈಟ್ ಪಾರ್ಟಿಗಳು ಆಯೋಜನೆ ಆಗ್ತಿದ್ವು. ಈ ಪಾರ್ಟಿಗಳಿಗೆ ರೆಡ್ ಬುಲ್ ಹಾಗೂ ಆಪಲ್ ಫ್ಲೇವರ್ ಹೆಸರಿನ ಎಂಡಿಎಂಎ ಡ್ರಗ್ಸ್ ಸಪ್ಲೈ ಆಗ್ತಿತ್ತು. ಈ ನಟರು ನಿರ್ಮಾಪಕ ಶಂಕರೇಗೌಡ ಆಯೋಜನೆ ಮಾಡ್ತಿದ್ದ ಪಾರ್ಟಿಗಳಲ್ಲಿ ಭಾಗಿಯಾಗಿ ಡ್ರಗ್ಸ್ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸುವ ವೇಳೆ ಪೆಡ್ಲರ್ಗಳಾದ ಜಾನ್ ಹಾಗೂ ಫಯೂಮ್ ನಟರ ಬಗ್ಗೆ ಬಾಯ್ಬಿಟ್ಟಿದ್ದಾರೆ ಅಂತ ಮೂಲಗಳು ಹೇಳ್ತಿವೆ. ಸದ್ಯ ಜಾನ್, ಫಯೂಮ್ ಹಾಗೂ ಶಂಕರೇಗೌಡ ಜೈಲುಪಾಲಾಗಿದ್ದಾರೆ. ಮೂವರು ಜೈಲು ಸೇರುತ್ತಿದ್ದಂತೆ ಕನ್ನಡದ ಸ್ಟಾರ್ ನಟರಿಗೆ ನಡುಕ ಶುರುವಾಗಿದೆ ಎಂದು ಹೇಳಲಾಗ್ತಿದೆ.
ಇಬ್ಬರು ಕನ್ನಡದ ನಟರ ಪೈಕಿ ಓರ್ವ ನಟ ಸ್ಯಾಂಡಲ್ವುಡ್ ಸೌತ್ ಬಾಯ್ಸ್ ಗ್ರೂಪ್ನ ಸದಸ್ಯ. ಲಾಕ್‌ಡೌನ್ ಟೈಮಲ್ಲಿ ನಗರದ ಹೊರವಲಯಗಳಲ್ಲಿ ಹೆಚ್ಚಾಗಿ ಡ್ರಗ್ಸ್ ಪಾರ್ಟಿ ಆಯೋಜನೆ ಮಾಡಲಾಗ್ತಿತ್ತು. ಕಾಟನ್ಪೇಟೆ ಕೇಸ್ನಲ್ಲಿ ಮಿಸ್ ಆಗಿದ್ದ ನಟ, ಈಗ ಗೋವಿಂದಪುರ ಕೇಸ್ನಲ್ಲಿ ಸಿಕ್ಕಿಬೀಳೋದು ಬಹುತೇಕ ಪಕ್ಕಾ ಎನ್ನಲಾಗಿದೆ. ಈ ಹಿಂದೆ ಒಂದು ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿತ್ತಾದರು ಪ್ರಭಾವ ಬಳಸಿ ಎಸ್ಕೇಪ್ ಆಗಿದ್ದರಂತೆ
ಗೋವಿಂದಪುರ ಪೊಲೀಸರು ಸದ್ಯ ಪ್ರಕರಣದಲ್ಲಿ ನಟರ ಇನ್ವಾಲ್ಮೆಂಟ್ ಬಗ್ಗೆ ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದಾರೆ. ಯಾರೇ ಆಗ್ಲಿ ಎವಿಡೆನ್ಸ್ ಸ್ಟ್ರಾಂಗ್ ಆಗಿ ಕಲೆಕ್ಟ್ ಮಾಡಿ ಕ್ರಮ ಕೈಗೊಳ್ಳುವಂತೆ ಕಮಿಷನರ್ ಕಮಲ್ ಪಂತ್ ಸೂಚಿಸಿದ್ದಾರೆ ಎನ್ನಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post