ಭಾರತದಲ್ಲಿ ಕೊರೊನಾ 2ನೇ ಅಲೆಯ ಆಟ ತೀವ್ರತೆ ಪಡೆದುಕೊಳ್ಳತೊಡಗಿದೆ. ಈ ನಡುವೆ ಯುರೋಪ್‌ನಲ್ಲಿ ಕೊರೊನಾ 3ನೇ ಅಲೆ ಆರಂಭವಾಗಿದೆ. ಒಂದೆಡೆ ಕೇಸ್ ಹೆಚ್ಚಾಗ್ತಿದೆ. ಇನ್ನೊಂದ್ಕಡೆ ಬೆಡ್ಗಳ ಸಮಸ್ಯೆ ತಲೆದೋರಿದೆ. ಇದ್ರಿಂದ ನಲುಗಿ ಹೋಗಿರೋ ಬಹುತೇಕ ಐರೋಪ್ಯ ರಾಷ್ಟ್ರಗಳು ಮತ್ತೆ ಲಾಕ್‍ಡೌನ್ ಎದುರಿಸುವ ಪರಿಸ್ಥಿತಿ ಬಂದಿದೆ.
ಆಸ್ಪತ್ರೆ ಐಸಿಯು, ಕೋವಿಡ್ ವಾರ್ಡ್ಗಳು ಭರ್ತಿ
ಕೊರೊನಾ ಹೋಯ್ತು ಅಂತ ಕೇರ್ಲೆಸ್ ಮಾಡಿದ್ದ ವಿಶ್ವದ ಜನರಿಗೆ ಕೊರೊನಾ ಮುಟ್ಟಿನೋಡಿಕೊಳ್ಳುವಂತೆ ಏಟು ನೀಡ್ತಿದೆ. ಅದರಲ್ಲೂ ರೂಪಾಂತರಿ ಕೊರೊನಾದ ಅಟ್ಟಹಾಸಕ್ಕೆ ಯುರೋಪನ ಹಲವು ದೇಶಗಳು ಒದ್ದಾಡ್ತಿವೆ.
ಯೂರೋಪ್ನಲ್ಲಿ ಮತ್ತೆ ‘ಕೊರೊನಾ’ಟ
ಯುರೋಪ್ ದೇಶಗಳಲ್ಲಿ ಬ್ರಿಟನ್ ಮ್ಯೂಟೆಂಟ್ ಕೊರೊನಾ ಕ್ರಮೇಣ ಹೆಚ್ಚಾಗ್ತಿದೆ. ಅದರಲ್ಲೂ ಫ್ರಾನ್ಸ್, ಜರ್ಮನಿ, ಇಟಲಿ, ಟರ್ಕಿ, ಪೊಲ್ಯಾಂಡ್, ರಷ್ಯಾ, ಸ್ಪೇನ್, ಸ್ವೀಡನ್, ರೊಮೇನಿಯಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಕೇಕೆ ಹಾಕ್ತಿದೆ. ಗಮನಿಸಬೇಕಾದ ಅಂಶವೆಂದ್ರೆ ಮಕ್ಕಳು, ಯುವ ಜನತೆ ಆರೋಗ್ಯದ ಮೇಲೆ ಕೊರೊನಾ ಹೆಚ್ಚು ದುಷ್ಪರಿಣಾಮ ಬೀರ್ತಿದೆ. ಇನ್ನು ಎರಡ್ಮೂರು ವಾರದಿಂದ ಯೂರೋಪ್ ದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗ್ತಿದ್ದು, ಸಾವಿನ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿವೆ. ಇಷ್ಟೇ ಅಲ್ಲದೇ ಕೊರೊನಾ ಅಟ್ಟಹಾಸಕ್ಕೆ ಹಲವು ಆಸ್ಪತ್ರೆಗಳ ಐಸಿಯು ಮತ್ತು ಕೋವಿಡ್ ವಾರ್ಡ್ಗಳು ಭರ್ತಿಯಾಗಿ ಸಂಕಷ್ಟ ಎದುರಿಸುವಂತಾಗಿದೆ.
ಹೆಮ್ಮಾರಿ ರಿಟರ್ನ್ಸ್ಗೆ ಕಾರಣವೇನು?
ಕಾರಣ – 01: ಬ್ರಿಟನ್ ರೂಪಾಂತರಿ ಆರ್ಭಟವನ್ನ ಕಡೆಗಣಿಸಿರುವುದು
ಕಾರಣ – 02: ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನ ಬಿಗಿಗೊಳಿಸದೇ ಇರುವುದು
ಕಾರಣ – 03: ಪ್ರತಿಭಟನೆ, ಜನ ಸೇರುವುದಕ್ಕೆ ನಿರ್ಬಂಧ ಇಲ್ಲದಿರುವುದು
ಕಾರಣ – 04: ಲಾಕ್ಡೌನ್ನಂತಹ ಕಠಿಣ ಕ್ರಮ ಅನುಸರಿಸದೇ ಇರುವುದು
ಕಾರಣ – 05: ಕೊರೊನಾ ಲಸಿಕೆ ಅಭಿಯಾನ ವಿಳಂಬ ಮಾಡಿರುವುದು
ಹೀಗೆ ಕೊರೊನಾ ಬಗ್ಗೆ ಕೇರ್ಲೆಸ್ ಮಾಡಿದ್ದ ಜನರಿಗೆ ಮತ್ತೆ ಆರ್ಥಿಕವಾಗಿ ಕಾಟ ಕೊಡೋಕೆ ಕೊರೊನಾ ಶುರು ಮಾಡಿದೆ. ಇತ್ತ ಕೊರೊನಾ ಕಂಟ್ರೋಲ್ಗೆ ಹಲವು ದೇಶಗಳಲ್ಲಿ ಲಾಕ್‍ಡೌನ್ ಮೊರೆ ಹೋಗಿದ್ರೆ ಇನ್ನೂ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಖಡಕ್ ರೂಲ್ಸ್ ಜಾರಿ ಮಾಡಲಾಗಿದೆ. ಸೋ ಆದಷ್ಟು ಕೊರೊನಾ ಬಗ್ಗೆ ಕೇರ್ಲೆಸ್ ಮಾಡದೇ ನಮ್ಮ ಎಚ್ಚರಿಕೆಯಲ್ಲಿ ನಾವೀರೋದು ಒಳ್ಳೆಯದ್ದು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post