ನವದೆಹಲಿ: ರಫೇಲ್ ಯುದ್ಧ ವಿಮಾನ ಒಪ್ಪಂದದ ಸಂದರ್ಭದಲ್ಲಿ ಅವ್ಯವಹಾರಗಳು ನಡೆದಿವೆಯಾ ಅನ್ನೋ ಪ್ರಶ್ನೆ ಮತ್ತೆ ಎದ್ದಿದೆ. ಫ್ರೆಂಚ್ ಪಬ್ಲಿಕೇಷನ್ ಒಂದು ಡೆಸ್ಸಾಲ್ಟ್ ( Dassault) ಸಂಸ್ಥೆ ವಿರುದ್ಧ ಗಂಭೀರವಾದ ವರದಿಯೊಂದನ್ನ ಮಾಡಿದೆ. ಈ ವರದಿ ಆಧಾರದ ಮೇಲೆ ಮೋದಿ ಸರ್ಕಾರಕ್ಕೆ ವಿಪಕ್ಷಗಳು ಪ್ರಶ್ನೆಗಳನ್ನ ಎಸೆದಿವೆ.
ವರದಿ ಏನು ಹೇಳಿದೆ?
2016 ರಲ್ಲಿ ಭಾರತ, ಫ್ರಾನ್ಸ್ ಜೊತೆ 60 ಸಾವಿರ ಕೋಟಿ ರೂಪಾಯಿ ಮೌಲ್ಯದ 36 ರಫೇಲ್ ಜೆಟ್ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದ ಏರ್ಪಟ್ಟ ಬೆನ್ನಲ್ಲೇ ರಫೇಲ್ ಯುದ್ಧ ವಿಮಾನಗಳನ್ನ ತಯಾರಿಸುವ ಸಂಸ್ಥೆ ಡೆಸಾಲ್ಟ್ ಭಾರತದ ದಲ್ಲಾಳಿಗೆ 1.1 ಮಿಲಿಯನ್ ಯುರೋ ನೀಡಿದೆ ಎಂದು ಅಲ್ಲಿನ ಮೀಡಿಯಾ ಪಾರ್ಟ್ ವರದಿ ಹೇಳಿದೆ.
ಫ್ರಾನ್ಸ್ನ ಆಂಟಿ-ಕರಪ್ಷನ್ ಏಜನ್ಸಿ, ಡೆಸ್ಸಾ ಸಂಸ್ಥೆಯ 2017 ಲೆಕ್ಕಪತ್ರಗಳನ್ನ ತಪಾಸಣೆ ಮಾಡಿದಾಗ 5,08,915 ಯುರೋ ಅನ್ನ ಮಿಡ್ಲ್ಮ್ಯಾನ್ಗೆ ಉಡುಗೊರೆಯಾಗಿ ನೀಡಿರೋದು ಪತ್ತೆಯಾಗಿದೆ ಅಂತಾ ವರದಿ ಹೇಳಿದೆ.
ರಫೇಲ್ ಯುದ್ಧ ವಿಮಾನಗಳ 50 ಬೃಹತ್ ಡಮ್ಮಿ ಮಾಡೆಲ್ಸ್ ತಯಾರಿಸಲು ಈ ಹಣವನ್ನ ಬಳಸಿಕೊಳ್ಳಲಾಗಿದೆ ಅಂತಾ ಸಂಸ್ಥೆ ಹೇಳಿದೆ. ಆದರೆ ಡಮ್ಮಿ ಮಾಡೆಲ್ಸ್ಗಳನ್ನ ತಯಾರಿಸಲಾಗಿತ್ತು ಅನ್ನೋದಕ್ಕೆ ಡೆಸಾಲ್ಟ್ ಕಂಪನಿ ಯಾವುದೇ ಪುರಾವೆಗಳನ್ನ ಒದಗಿಸಿಲ್ಲ ಅನ್ನೋದು ತನಿಖೆಯಿಂದ ತಿಳಿದುಬಂದಿದೆ.
ಇನ್ವಾಯ್ಸ್ ಮಾರ್ಚ್ 30, 2017 ರಂದು ನೀಡಿರುವ ವರದಿ ಪ್ರಕಾರ, ಮಿಡ್ಲಮ್ಯಾನ್ಗೆ ನೀಡಿರುವ ಉಡುಗೊರೆಯನ್ನ ಸಮರ್ಥಿಸಿಕೊಳ್ಳಲು ‘ಸಾಮ್ಯಾನ್ಯ ಉಡಗೊರೆಗಿಂದ ದೊಡ್ಡದು’ ಎಂದು ಡೆಸಾಲ್ಟ್ ಹೇಳಿದೆ ಎಂದಿದೆ. ಅಲ್ಲದೆ 50 ಡಮ್ಮಿ ರಫೇಲ್ ಮಾಡೆಲ್ಗಳನ್ನ ತಯಾರಿಸಲು ಡೆಫ್ಸೀಸ್ ಸಲ್ಯೂಷನ್ಗೆ 1,017,850 ಯುರೋಗಳನ್ನ ನೀಡಲಾಗಿದೆ. ಅದರಂತೆ ಪ್ರತೀ ಮಾಡಲ್ಗೆ 20,000ಕ್ಕೂ ಹೆಚ್ಚು ಯುರೋಗಳನ್ನ ನೀಡಲಾಗಿದೆ ಅಂತಾ ವರದಿ ಹೇಳಿದೆ.
ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಎನ್ಡಿಎ ಸರ್ಕಾರದ ವಿರುದ್ಧ ಕಿಡಿಕಾರಿದೆ. ಕಾಂಗ್ರೆಸ್ ಹಿರಿಯ ನಾಯಕ ರಂದೀಪ್ ಸುರ್ಜೆವಾಲಾ ಸುದ್ದಿಗೋಷ್ಠಿ ನಡೆಸಿ, ಮೋದಿ ಸರ್ಕಾರಕ್ಕೆ ಪ್ರಶ್ನೆಗಳನ್ನ ಕೇಳಿದ್ದಾರೆ. ರಫೇಲ್ ಯುದ್ಧ ವಿಮಾನದ ಒಪ್ಪಂದ ವಹಿವಾಟು ಒಂದರಲ್ಲಿ ‘ಗ್ರಾಹಕರಿಗೆ ಉಡುಗೊರೆ’ ಎಂದು ಭಾರೀ ಮೊತ್ತವನ್ನ ಪಾವತಿಸಿರುವ ಬಗ್ಗೆ ಡೆಸಾಲ್ಟ್ ಹೇಳಿದೆ. ಅದನ್ನು ಕ್ಲೈಂಟ್‌ಗೆ ಗಿಫ್ಟ್ ಎಂದು ಏಕೆ ಕರೆಯಲಾಯಿತು? ಇದು ಗುಪ್ತ ವಹಿವಾಟಿನ ಭಾಗವೇ? ಫ್ರೆಂಚ್ ಸುದ್ದಿ ಏಜನ್ಸಿ ಮಾಡಿದ ವರದಿಯಿಂದಾಗಿ 60 ಸಾವಿರ ರೂಪಾಯಿಗಳ ರಫೇಲ್ ಒಪ್ಪಂದದ ಮುಖವಾಡ ಕಳಚಿದೆ.
ಆರಂಭದಲ್ಲಿ ಎರಡು ದೇಶಗಳ ರಕ್ಷಣಾ ಸಚಿವಾಲಯಗಳು ಈ ಒಪ್ಪಂದವನ್ನ ಮಾಡಿಕೊಂಡಿವೆ ಅಂತಾ ಹೇಳಲಾಗಿತ್ತು. ಇದೀಗ ಮಧ್ಯವರ್ತಿಗಳು ಯಾಕೆ ಬಂದಿದ್ದಾರೆ? ‘ಕ್ಲೈಂಟ್ ಗಿಫ್ಟ್’ ಯಾರಿಗೆ ನೀಡಲಾಗಿದೆ ಅನ್ನೋದನ್ನ ಬಹಿರಂಗಮಾಡಬೇಕು ಎಂದು ಆಗ್ರಹಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post