ಇಂಡಿಯನ್ ಪ್ರೀಮಿಯರ್ ಲೀಗ್ನ 13 ಆವೃತ್ತಿಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇದೀಗ 14ನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಎಲ್ಲಾ ಫ್ರಾಂಚೈಸಿಗಳು ತಮ್ಮ ಗೇಮ್ ಪ್ಲ್ಯಾನ್‌ಗಳಿಗೆ ಅನುಸಾರವಾಗಿ, ತಂಡಗಳನ್ನ ರಚಿಸುತ್ತಿವೆ. ಈ ಬೆನ್ನಲ್ಲೆ CSK ಸಾರಥಿ ಸೇರಿದಂತೆ ಈ ಐದು ಆಟಗಾರರಿಗೆ, ಇದುವೇ ಕೊನೆಯ IPL ಆಗಿರಲಿದೆ ಎಂದು ಅಂದಾಜಿಸಲಾಗಿದೆ.
ಪ್ರತಿ ಬಾರಿಯಂತೆ ಈ ಬಾರಿಯೂ ಐಪಿಎಲ್ ಭಾರೀ ನಿರೀಕ್ಷೆ ಹೆಚ್ಚಿಸಿದೆ. ತಂಡಗಳು ತಮ್ಮದೇ ಆದ ಕಾರ್ಯತಂತ್ರ ರೂಪಿಸಿಕೊಳ್ತಿವೆ. ಹೇಗೆಲ್ಲಾ ಪ್ಲಾನ್ ರೂಪಿಸಿದ್ರೆ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ, ತೊಡಗಿವೆ. ಮತ್ತೊಂದೆಡೆ ಈ ಬಾರಿಯ IPL, ಅನೇಕ ಆಟಗಾರರಿಗೆ ಬಹುತೇಕ ಕೊನೆಯ ಐಪಿಎಲ್ ಆಗಿರಲಿದೆ. ಇಂಥದ್ದೊಂದು ಮಾತುಗಳು ಕ್ರಿಕೆಟ್ ಸರ್ಕಲ್ನಲ್ಲಿ ಕೇಳಿಬರುತ್ತಿದೆ.
ವಿಪರ್ಯಾಸ ಏನೆಂದರೆ, ಈ ಮಿಲಿಯನ್ ಡಾಲರ್ ಟೂರ್ನಿಯೇ ಕೊನೆದಾಗ್ತಿರೋದು ಕ್ರಿಕೆಟ್ ಲೋಕದ ದಿಗ್ಗಜರಿಗೆ..!! ನಾವು ಪ್ರಸ್ತಾಪಿಸುತ್ತಿರುವ ಈ ಆಟಗಾರರು, ಶೇಕಡ 99ರಷ್ಟು ಈ IPL ನಂತರ ತಮ್ಮ ಕ್ರಿಕೆಟ್ ಜೀವನವನ್ನ ಮುಕ್ತಗೊಳಿಸಿಲಿದ್ದಾರೆ. IPLನಲ್ಲಿ ಭರಪೂರ ಮನರಂಜನೆ ನೀಡಿರೋ ಈ ಆಟಗಾರರ ಕೊಡುಗೆ, ಅಸಾಧಾರಣ..!! ಆಟಗಾರರ ಆಟವನ್ನ ಮಿಸ್ ಮಾಡಿಕೊಳ್ತಿದ್ದೇವೆ ಅಂತಾ ತಿಳಿದ ಅಭಿಮಾನಿಗಳ ಎದೆ, ಭಾರವಾಗಿಸಿದೆ.
Tactical Thrisoola Viyoogam! #CSKStyledByMyntra #WhistlePodu #Yellove 🦁💛 @myntra pic.twitter.com/IWwMcytKOb
— Chennai Super Kings (@ChennaiIPL) April 3, 2021
ನಂ. 1- ಎಂ.ಎಸ್. ಧೋನಿ, CSK
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ, ಇದೇ ಕೊನೆಯ IPL ಟೂರ್ನಿ. ಹಾಗೇನೆ ಇಂಥ ಮಾತುಗಳು, ಅಭಿಮಾನಿಗಳ ಎದೆಬಡಿತವನ್ನೂ ಹೆಚ್ಚಿಸಿವೆ. ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದ ಧೋನಿಗೆ, 2020ರ IPL ಟೂರ್ನಿಯೇ ಲಾಸ್ಟ್ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಮುಂದಿನ IPL ಆಡುವುದಾಗಿ ಮಾಹಿ ಖಚಿತಪಡಿಸಿದ್ದರು. 188 ಪಂದ್ಯಗಳಲ್ಲಿ ಸಿಎಸ್ಕೆ ತಮಡವನ್ನ ಮುನ್ನಡೆಸಿರೋ 39 ವರ್ಷದ ಧೋನಿ, 110 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಐಪಿಎಲ್ನ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.
ನಂ. 2 – ಕ್ರಿಸ್ ಗೇಲ್, ಪಂಜಾಬ್ ಕಿಂಗ್ಸ್
ಟಿ-ಟ್ವೆಂಟಿ ಕ್ರಿಕೆಟ್ನ ಅತ್ಯಂತ ಅಪಾಯಕಾರಿ ಬ್ಯಾಟ್ಸ್ಮನ್ಗಳಲ್ಲಿ, ಕ್ರಿಸ್ ಗೇಲ್ ಕೂಡ ಒಬ್ಬರು. 41 ವರ್ಷದ ವಿಂಡೀಸ್ನ ದೈತ್ಯ ಗೇಲ್, ಈ ಬಾರಿ ಐಪಿಎಲ್ ಆಡ್ತಿರೋದ್ರಿಂದ ಅಭಿಮಾನಿಗಳು ಸಿಡಿಲಬ್ಬರದ ಬ್ಯಾಟಿಂಗ್ ನಿರೀಕ್ಷಿಸುತ್ತಿದ್ದಾರೆ. ಆದರೆ ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಟೂರ್ನಿಯಿಂದ ಗೇಲ್, ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. IPL ಇತಿಹಾಸಲ್ಲಿ 6 ಶತಕ ಸಿಡಿಸಿರೋ ಗೇಲ್, ಕಿಂಗ್ ಆಫ್ ಟಿ-ಟ್ವೆಂಟಿ ಎನಿಸಿಕೊಂಡಿದ್ದಾರೆ. ಹಾಗೇ ಶ್ರೀಮಂತ ಲೀಗ್ನಲ್ಲಿ 349 ಸಿಕ್ಸರ್ ಸ್ಫೋಟಿಸಿರೋ ಗೇಲ್, ಐಪಿಎಲ್ನಲ್ಲಿ ಅಜೇಯ 175 ರನ್ಗಳ ವೈಯಕ್ತಿಕ ಸ್ಕೋರ್ ಸಹ ದಾಖಲಿಸಿದ್ದಾರೆ.
Fafulously yours and ready! #WhistlePodu #Yellove 💛🦁 pic.twitter.com/viwtuTJcoT
— Chennai Super Kings (@ChennaiIPL) April 2, 2021
ನಂ. 3 – ಫಾಪ್ ಡು ಪ್ಲೆಸಿಸ್, CSK
ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡುಪ್ಲಸಿ, 2012ರಿಂದ ಮಿಲಿಯನ್ ಡಾಲರ್ ಟೂರ್ನಿಯ ಭಾಗವಾಗಿದ್ದಾರೆ. ಚೊಚ್ಚಲ ಟೂರ್ನಿಯಲ್ಲೇ ಧೋನಿ ನಾಯಕತ್ವದಡಿ ಆಡಿದ ಡುಪ್ಲಸಿ, 13 ಪಂದ್ಯಗಳಲ್ಲಿ 398 ರನ್ ಸಿಡಿಸಿ ಅಬ್ಬರಿಸಿದ್ರು. ಟೂರ್ನಿಯಿಂದ ಟೂರ್ನಿಗೆ ಅತ್ಯುತ್ತಮ ಪ್ರದರ್ಶನ ನೀಡ್ತಿರುವ ಈ ಆಫ್ರಿಕನ್ ವಾರಿಯರ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೆನ್ನೆಲುಬಾಗಿದ್ದಾರೆ. ಆದ್ರೆ 36 ವರ್ಷದ ಡುಪ್ಲಸಿಗೆ ಇದೇ ಕೊನೆಯ ಐಪಿಎಲ್ ಅಂತ, ಹೇಳಲಾಗ್ತಿದೆ.
ನಂ. 4 – ಹರ್ಭಜನ್ ಸಿಂಗ್, KKR
ಒನ್ ಆಫ್ ದ ಬೆಸ್ಟ್ ಆಫ್ ಸ್ಪಿನ್ನರ್ 40 ವರ್ಷದ ಹರ್ಭಜನ್ ಸಿಂಗ್ ಕೂಡ, ನಿವೃತ್ತಿಯ ಸಾಲಿನಲ್ಲಿದ್ದಾರೆ. 2008ರಿಂದ ಮಿಲಿಯನ್ ಟೂರ್ನಿಯ ಭಾಗವಾಗಿರೋ ದೂಸ್ರಾ ಸ್ಪೆಷಲಿಸ್ಟ್, 2021ರ ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯಲಿದ್ದಾರೆ. ವೈಯಕ್ತಿಕ ಕಾರಣ ಹೇಳಿ ಕಳೆದ ವರ್ಷ ಇಡೀ ಟೂರ್ನಿಗೆ ಅಲಭ್ಯವಾಗಿದ್ದ ಭಜ್ಜಿಯನ್ನ, ಸಿಎಸ್ಕೆ ತಂಡದಿಂದ ಕೈಬಿಟ್ಟಿತ್ತು. ಫೆಬ್ರವರಿ 18ರಂದು ನಡೆದ ಮಿನಿ ಹರಾಜಿನಲ್ಲಿ 2 ಕೋಟಿಗೆ ಕೆಕೆಆರ್ ಪಾಲಾಗಿರುವ ಭಜ್ಜಿಗೆ, ಇದೇ ಲಾಸ್ಟ್ ಐಪಿಎಲ್.
ನಂ. 5 – ಇಮ್ರಾನ್ ತಾಹೀರ್, CSK
ಇಮ್ರಾನ್ ತಾಹೀರ್ ಬಹುಶಃ oldest player in IPL 2021. 42 ವರ್ಷದ ತಾಹೀರ್, 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಲಿದ್ದಾರೆ. ಎಲ್ಲಾ ಬೌಲರ್ಗಳಿಗಿಂತ ತಾಹೀರ್ ತುಸು ಭಿನ್ನ ಎಂದರೆ ತಪ್ಪಾಗಲ್ಲ. ಅವರಲ್ಲಿರೋ ಕ್ರಿಕೆಟ್ ಆಡೋ ಉತ್ಸಾಹಕ್ಕೆ ಎಂಥವರೂ ಮನಸೋಲುತ್ತಾರೆ. ವಿಕೆಟ್ ಕಬಳಿಸಿದಾಗ ತಾಹೀರ್ ಸಂಭ್ರಮಿಸುವ ಪರಿಗೆ, ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ. 2014ರಿಂದ ಡೆಲ್ಲಿ ಮತ್ತು 2018ರಿಂದ ಸಿಎಸ್ಕೆ ಕ್ಯಾಂಪ್ ಸೇರಿಕೊಂಡಿರೋ ತಾಹೀರ್ಗೆ, ಇದೇ ಲಾಸ್ಟ್ ಐಪಿಎಲ್ ಎಂದು ಹೇಳಲಾಗ್ತಿದೆ.
ಡು ಪ್ಲೆಸಿಸ್, ತಾಹೀರ್ ಕೂಡ ನಿವೃತ್ತಿ ರೇಸ್ನಲ್ಲಿ..?
ಇವರಷ್ಟೆ ಅಲ್ಲ..! ವೃದ್ದಿಮಾನ್ ಸಾಹ, ಅಮಿತ್ ಮಿಶ್ರಾ, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ಕೇದಾರ್ ಜಾಧವ್ ಕೂಡ, ನಿವೃತ್ತಿ ಸಾಲಿನಲ್ಲಿದ್ದಾರೆ. ಒಟ್ನಲ್ಲಿ..! ಪ್ರಮುಖ ಆಟಗಾರರು ಮುಂದಿನ ಐಪಿಎಲ್ನಿಂದ ದೂರವಾಗ್ತಾರೆ ಅನ್ನೋ ಮಾತುಗಳು, ಕ್ರಿಕೆಟ್ ವಲಯದಲ್ಲಿ ಹೆಚ್ಚು ಸದ್ದು ಮಾಡ್ತಿದೆ. ಆದರೆ ಮುಂದೆ ಈ ಆಟಗಾರರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಅನ್ನೋದು, ಐಪಿಎಲ್ ಮುಗಿದ ಮೇಲೆ ಗೊತ್ತಾಗಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post