ಬೆಂಗಳೂರು: ಎಸ್ಮಾ ಜಾರಿ ಸರ್ಕಾರದ ಕೊನೆಯ ಅಸ್ತ್ರವಾಗಬೇಕು. ಆದ್ದರಿಂದ ಸರ್ಕಾರ ತಾಳ್ಮೆಯಿಂದ ಸಾರಿಗೆ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಏಕೆಂದರೆ ಅವರು ಮುಷ್ಕರ ಮಾಡುವುದಾಗಿ ಘೋಷಣೆ ಮಾಡಿದ್ದರು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಸಾರಿಗೆ ಮುಷ್ಕರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ ನಡೆದ ಮುಷ್ಕರದ ವೇಳೆ ಸರ್ಕಾರ ನಾಯಕರೊಂದಿಗೆ ಚರ್ಚೆ ನಡೆಸಿತ್ತು. ಆ ವೇಳೆ 6ನೇ ವೇತನ ಆಯೋಗ ಜಾರಿ ಕುರಿತಂತೆ ಮಾತುಕೊಟ್ಟಿದ್ದರು ಎಂದು ನೌಕರರು ಹೇಳುತ್ತಿದ್ದಾರೆ. ಇದರಿಂದ 700 ಕೋಟಿ ರೂಪಾಯಿ ಇಲಾಖೆ ಮೇಲೆ ಹೊರೆಯಾಗುತ್ತದೆ ಎಂದು ಅಧಿಕಾರಿಗಳು ಹೇಳ್ತಿದ್ದಾರೆ. ಸರ್ಕಾರ ಸಂಕಷ್ಟದ ಪರಿಸ್ಥಿತಿ ಅಂತ ಹೇಳಿ 72 ಸಾವಿರ ಕೋಟಿ ಸಾಲ ತೆಗೆದುಕೊಳ್ಳುತ್ತಿದೆ. ಇದರಲ್ಲಿ 700 ಕೋಟಿ ರೂಪಾಯಿ ಕಷ್ಟಪಟ್ಟು ದುಡಿಯುವ ನಮಗೆ ಕೊಟ್ಟರೆ ತಪ್ಪಿಲ್ಲ ಎಂಬುವುದು ನೌಕರರ ಮಾತು. ಇದು ದೊಡ್ಡ ವಿಚಾರವಲ್ಲ ಎಂಬುವುದು ಅವರ ವಾದವಾಗಿದೆ.
ನನ್ನ ಮಾಹಿತಿಯ ಅನ್ವಯ 700-800 ಕೋಟಿ ರೂಪಾಯಿ ಹೊರೆಯಾಗಬಹುದು. ನೌಕರರನ್ನು ಹೆದರಿಸಿ ತುಂಬಾ ದಿನ ನಡೆಸಲು ಆಗಲ್ಲ. ಇದರಲ್ಲಿ ಯಾವುದೇ ಕುತಂತ್ರವಿದ್ದರೂ ಸರಿ ಪಡಿಸುವುದು ಸರ್ಕಾರ ಕರ್ತವ್ಯ. ಸಾರ್ವಜನಿಕರಿಗೆ ತೊಂದರೆಯಾಗದಂತೆ ತಕ್ಷಣ ಅವರನ್ನು ಕರೆದು ಬಗೆಹರಿಸಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post