ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ಕೊರೊನಾ ವಿಘ್ನ ಎದುರಿಸಿದ್ದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಇಂದು ಶುಭ ಸುದ್ದಿ ಲಭಿಸಿದ್ದು, ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ಗೆ ಕೋವಿಡ್ ನೆಗೆಟಿವ್ ಕಂಡು ಬಂದಿದೆ. ಇದರೊಂದಿಗೆ ಪಡಿಕ್ಕಲ್ ತಂಡದೊಂದಿಗೆ ಪುನಃ ಸೇರ್ಪಡೆಯಾಗಿದ್ದಾರೆ.
2021ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈಸೂಪರ್ ಕಿಂಗ್ಸ್, ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಡಿಕ್ಕಲ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಮಾರ್ಚ್ 22ರಿಂದಲೂ ಪಡಿಕ್ಕಲ್ ಕ್ವಾರಂಟೀನ್ನಲ್ಲಿದ್ದರು. ಸದ್ಯ ಕೊರೊನಾದಿಂದ ಚೇತರಿಸಿಕೊಂಡಿರುವ ಪಡಿಕ್ಕಲ್, ಆರ್ಸಿಬಿ ಕ್ಯಾಂಪ್ಗೆ ವಾಪಸ್ ಆಗಿದ್ದು, ಅವರ ಆರೋಗ್ಯ ಉತ್ತಮವಾಗಿದೆ ಎಂದು ಆರ್ಸಿಬಿ ಸ್ಪಷ್ಟಪಡಿಸಿದೆ.
ಸದ್ಯ ಪಡಿಕ್ಕಲ್ ಟೂರ್ನಿಯ ಆರಂಭದ ಪಂದ್ಯಗಳಿಗೂ ಅವರು ಲಭ್ಯರಾಗಲಿದ್ದಾರೆ. ಇತ್ತೀಚೆಗೆ ನಡೆದ ದೇಶೀಯ ಟೂರ್ನಿ ವಿಜಯ್ ಹಜಾರೆ ಟೂರ್ನಿಯಲ್ಲಿ ಪಡಿಕ್ಕಲ್ ಭರ್ಜರಿ ಪ್ರದರ್ಶನ ನೀಡಿ ದಾಖಲೆ ಬರೆದಿದ್ದರು. ಏ.9ರಂದು ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಆರ್ಸಿಬಿ ಎದುರಿಸಲಿದೆ.
Bold Diaries: Devdutt Padikkal joins the RCB camp after testing negative for COVID-19. He’s healthy, feeling better and raring to go. Here’s a message to all RCB fans from Devdutt.#PlayBold #WeAreChallengers #IPL2021 pic.twitter.com/BtVszNABJW
— Royal Challengers Bangalore (@RCBTweets) April 7, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post