ಬೀದರ್: ಬೀದರ್ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯುವಕರು ಕೆಲಸ ಕೇಳಿದರೆ ಲಂಚ ಕೇಳ್ತಾರೆ..ಯುವತಿಯರು ಕೆಲಸ ಕೇಳಿದರೆ ಮಂಚಕ್ಕೆ ಕರಿತಾರೆ. ಇಂತಹ ಲಂಚ, ಮಂಚದ ಸರ್ಕಾರ ಬೇಕಾ..? ಎಂದು ಪ್ರಶ್ನಿಸಿದ್ದಾರೆ.
ಯಾವಾಗ ಹೈದ್ರಾಬಾದ್ ಕರ್ನಾಟಕದ ಜನ ಆರ್ಟಿಕಲ್ 371ಜೆ ಗೆ ಬೇಡಿಕೆ ಇಟ್ಟಿದ್ರೋ ಆಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಎಲ್ ಕೆ ಅಡ್ವಾಣಿ ಡೆಪ್ಯುಟಿ ಪ್ರೈಮ್ ಮಿನಿಸ್ಟರ್ ಆಗಿದ್ರು. ಆಗ ಲಿಖಿತ ರೂಪದಲ್ಲಿ ಬರೆದು ಕಳುಹಿಸುತ್ತಾರೆ ಆರ್ಟಿಕಲ್ 371 ಕೊಡಲು ಸಾಧ್ಯವಿಲ್ಲ ಅಂತ ತಿರಸ್ಕಾರ ಮಾಡಿ ಕಳಿಸ್ತಾರೆ. ಯಾವಾಗ ನಿಮ್ಮ ಓಟು ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ ಹಾಗೂ ಧರ್ಮಸಿಂಗ್ ಅವರಿಗೆ ಬಿತ್ತೋ ಆಗ ಕಲಂ 371 ಜಾರಿಗೆ ಬಂತು. ಆದರೆ ನಾವು ಇವತ್ತು ಎನಾದರೂ ಅನುದಾನ ಕೇಳಿದರೆ ಲಂಚ ಕೇಳ್ತಾರೆ. ಅನುದಾನ ಕೇಳಿದ್ರೆ ಲಂಚ ಕೇಳ್ತಾರೆ.. ಯುವಕ, ಯುವತಿಯರು ಕೆಲಸ ಕೇಳಿದರೆ ಮಂಚಕ್ಕೆ ಕರಿತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post