ಬೆಳಗಾವಿ: ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥಗೌಡ ಇಂದು ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.. ಒಂದು ಲೋಕಸಭಾ, ಎರಡು ವಿಧಾನಸಭಾ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ಗೆ ಬೆಂಬಲ ನೀಡುವಂತೆ ವಿವಿಧ ಪಕ್ಷ, ಸಂಘಟನೆಗಳಿಗೆ ಮನವಿ ಮಾಡಿದ್ದಾರೆ. ವಿವಿಧ ಸಂಘಟನೆ, ಪಕ್ಷಗಳಿಗೆ ಪತ್ರ ಬರೆಯಲು ತೀರ್ಮಾ ಮಾಡಲಾಗಿದೆ. ಭಾರತೀಯ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆಯುತ್ತೇವೆ.. ನಮ್ಮ ಅಭ್ಯರ್ಥಿ ಬೆಂಬಲಕ್ಕೆ ಮನವಿ ಮಾಡುತ್ತೇನೆ. ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್, ಕೊಡಿಹಳ್ಳಿ ಚಂದ್ರಶೇಖರ್, ಕುರಬೂರು ಶಾಂತಕುಮಾರ, ಚನ್ನಪ್ಪ ಪೂಜಾರಿ ಸೇರಿ ವಿವಿಧ ರೈತ ಸಂಘದ ಮುಖಂಡರಿಗೂ ಮನವಿ ಮಾಡುತ್ತೇವೆ.
ರಾಜಕಾರಣದಲ್ಲಿ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷ ನಿಮ್ಮ ಜೊತೆ ಇರುತ್ತೆ, ಈಗ ನೀವು ಬೆಂಬಲ ನೀಡಿ ಎಂದು ನೇಕಾರರ ಸಂಘ, ಶಿಕ್ಷಕರ ಸಂಘ, ವೀರ ಯೋಧರಿಗೆ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಬೆಂಬಲ ನೀಡಿ ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು.. ಸರ್ಕಾರಕ್ಕೆ ಯಾವುದೇ ನೌಕರರ ದುಃಖ ದುಮ್ಮಾನದ ಅರಿವಿಲ್ಲ. ಮುಷ್ಕರ ಇವತ್ತು ಮಾಡುತ್ತೇನೆಂದು ನೌಕರರು ಹೇಳಿಲ್ಲ. ಹಿಂದೆಯೇ ಸರ್ಕಾರದ ಗಮನಕ್ಕೆ ತಂದಿದ್ದರು. ನೌಕರರನ್ನು ಕರೆದು ಸರ್ಕಾರ ಅದನ್ನ ಬಗೆಹರಿಸಬೇಕು. ಯಾವುದಕ್ಕೂ ಒಂದು ಪರಿಹಾರ ಇರಬೇಕು. ಹಣಕಾಸು ಸಮಸ್ಯೆ ಮತ್ತೊಂದು ಇದ್ದೇ ಇರುತ್ತೆ. ಪ್ರತಿಯೊಂದನ್ನೂ ವ್ಯಾಪಾರದ ತರಹ ನೋಡಲು ಆಗುವುದಿಲ್ಲ. ಸರ್ಕಾರ ಮಧ್ಯಪ್ರವೇಶಿಸಿ ಸಾರ್ವಜನಿಕರಿಗೆ ಆಗುವ ತೊಂದರೆ ತಪ್ಪಿಸಬೇಕು. ನೌಕರರಿಗೆ ಗೌರವ ಕೊಡಬೇಕು. ಕಾಂಗ್ರೆಸ್ ಪಕ್ಷದ ಬೆಂಬಲ ಸಾರಿಗೆ ನೌಕರರಿಗೆ ಇದೆ ಎಂದು ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post