ಬೆಂಗಳೂರು: ಇಲ್ಲೋರ್ವ ನಿವೃತ್ತ ಇಂಜಿನಿಯರ್ 2000ಕ್ಕೂ ಅಧಿಕ ಮರ ಗಿಡಗಳನ್ನ ತಮ್ಮ ಮನೆಯ ಟೆರೇಸ್ನಲ್ಲೇ ಬೆಳೆಸುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.
ಇವ್ರ ಹೆಸರು ನಟರಾಜ್ ಉಪಾಧ್ಯ, ಮೂಲತಃ ಉಡುಪಿಯವರಾದ ಇವರು ನೆಲೆಸಿರೋದು ಬೆಂಗಳೂರಿನಲ್ಲಿ. ಸಿಲಿಕಾನ್ ಸಿಟಿಯ ಬಿಸಿಲಿನ ಬೇಗೆ ನೋಡಿ ತಮ್ಮ ಮನೆಯ ಟೆರೇಸ್ನಲ್ಲೇ ಗಿಡ ನೆಡೋಕೆ ಶುರು ಮಾಡಿದ್ರಂತೆ.
ಇವ್ರ ಮನೆಯ ಟೆರೇಸ್ನಲ್ಲೇ ಇವೆ ಬರೋಬ್ಬರಿ 2500 ಗಿಡಗಳು
2008ರಲ್ಲಿ ಇಂಜಿನಿಯರ್ ವೃತ್ತಿಯಿಂದ ನಿವೃತ್ತಿ ಹೊಂದಿದ ಇವ್ರು ಮನೆಯ ಟೆರೇಸ್ನಲ್ಲೇ ಗಿಡ ಬೆಳೆಸೋಕೆ ಶುರು ಮಾಡಿದ್ರಂತೆ. ಅಲ್ಲಿಂದ ಇಲ್ಲಿವರೆಗೆ ಸುಮಾರು 300ಕ್ಕೂ ವಿವಿಧ ತಳಿಯ 2,500 ಗಿಡ ಮರಗಳನ್ನ ಬೆಳೆಸಿದ್ದಾರೆ. ಇರೋ ಸಣ್ಣ ಜಾಗದಲ್ಲೇ ಇವ್ರು ಇಷ್ಟು ಗಿಡ ಬೆಳೆಸಿದ್ದು, ಈ ಯಾವುದಕ್ಕೂ ಸಹ ಮಣ್ಣು ಬಳಸೇ ಇಲ್ವಂತೆ, ಮಣ್ಣು ಇಲ್ಲದೆ ಗಿಡಗಳು ಹೇಗೆ ಬೆಳೆದವು ಅಂತಾ ನೀವು ಪ್ರಶ್ನಿಸಬಹುದು. ಆದ್ರೆ ಇವ್ರು ಮಣ್ಣಿನ ಬದಲಾಗಿ ಕೇವಲ ರಸಗೊಬ್ಬರ ಮಾತ್ರ ಬಳಸೋದಂತೆ.
ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವ್ರು ಅಮೆರಿಕಾದಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಇಷ್ಟಾದ್ರೂ ಸಹ ಪರಿಸರದ ಬಗ್ಗೆ ಇರೋ ಪ್ರೇಮದಿಂದ ಇರೋ 1,500 ಚದರ ಅಡಿಯಲ್ಲಿ ಸಾವಿರಗಟ್ಟಲೆ ಗಿಡಗಳನ್ನ ಬೆಳೆದಿದ್ದಾರೆ. ಅದಲ್ಲದೇ ಇಲ್ಲಿ ಬಿಡೋ ಹೂವು ಹಣ್ಣುಗಳನ್ನು ಸಹ ಇವ್ರು ಬಳಸೋಲ್ಲವಂತೆ. ಬದಲಾಗಿ ಇವನ್ನೆಲ್ಲಾ ಪ್ರಾಣಿ ಪಕ್ಷಿಗಳಿಗೆ ಆಹಾರವಾಗಿ ಬಿಡ್ತಾರೆ.
ನಾವು ಎಷ್ಟೆಲ್ಲಾ ಪರಿಸರ ಹಾನಿ ಮಾಡ್ತೇವೆ. ಆದ್ರೆ, ಪರಿಸರ ಮಾತ್ರ ಮಾನವನಿಗೆ ಅನ್ಯಾಯ ಮಾಡೋದು ಅತೀ ವಿರಳ. ಅದೇನೇ ಇರ್ಲಿ. ಕೆಲ್ಸದಿಂದ ನಿವೃತ್ತಿ ಹೊಂದಿದ್ರೆ ಸಾಕು ಅದೆಷ್ಟೋ ಜನ ಸಾಕಪ್ಪ ಇಷ್ಟು ವರ್ಷ ಕೆಲಸ ಮಾಡಿದ್ದು. ಆರಾಮಾಗಿ ಮನೇಲಿ ಇರೋಣ ಅಂತಾರೆ. ಈ ಮಧ್ಯೆ, ನಟರಾಜ್ ಉಪಾಧ್ಯ ಪರಿಸರ ಸಂರಕ್ಷಣೆಗಾಗಿ ಈ ರೀತಿ ಕಾರ್ಯ ಮಾಡ್ತಿರೋದು ನಿಜಕ್ಕೂ ಶ್ಲಾಘನೀಯ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post