ಬೆಂಗಳೂರು: ಪ್ರಯಾಣಿಕರಿಗೆ ಸರ್ಕಾರದಿಂದ ಪ್ರಯಾಣದ ವ್ಯವಸ್ಥೆಯಾಗಿದೆ, ಮುಷ್ಕರದಿಂದ ಜನರಿಗೆ ತೊಂದರೆಯಾಗದಂತೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಅಂತಾ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 6ನೇ ವೇತನ ಆಯೋಗದಂತೆ ಸಂಬಳ ನೀಡಲು ಆಗಲ್ಲ ಅಂದಿದ್ವಿ. ಸರ್ಕಾರಿ ನೌಕರರನ್ನಾಗಿಸಲು ಆಗಲ್ಲವೆಂದು ಸ್ಪಷ್ಟಪಡಿಸಿದ್ದೆವು. ಈಗಾಗಲೇ ಸಾರಿಗೆ ಮುಖಂಡರ ಜತೆ ಸಾಕಷ್ಟು ಸಭೆ ನಡೆದಿವೆ. ಕಳೆದ ಡಿಸೆಂಬರ್ನಲ್ಲಿ ಸಾರಿಗೆ ನೌಕರರು ಮುಷ್ಕರ ಮಾಡಿದ್ರು. ಸಿಎಂ ಮತ್ತು ಸಚಿವರುಗಳು ಸಾಕಷ್ಟು ಸಭೆ ನಡೆಸಿದ್ದಾರೆ. ಜನರ ಸೇವೆಗೆ ಸಾರಿಗೆ ನೌಕರರು ಬೆವರು ಹರಿಸಿದ್ದಾರೆ. ಮುಷ್ಕರ ಮಾಡಲ್ಲ ಅಂತ ಹೇಳಿ ಮತ್ತೆ ಮುಷ್ಕರ ಮಾಡಿದ್ದೀರಿ. ಈ ರೀತಿ ಹಠ ಮಾಡಿ ಮುಷ್ಕರ ಮಾಡಿದ್ದು ಇದೇ ಮೊದಲು ಎಂದರು.
ಆರ್ಥಿಕ ಪರಿಸ್ಥಿತಿ ನೋಡಿ ಸಂಬಳ ಹೆಚ್ಚಳ ನಿರ್ಧರಿಸ್ತೀವಿ. ಅನೇಕ ಬಾರಿ ಸಾರಿಗೆ ನೌಕರರ ಸಂಬಳ ಹೆಚ್ಚಿಸಿದ್ದೇವೆ. 2000ರಲ್ಲಿ 5%ರಷ್ಟು, 2008ರಲ್ಲಿ 8%ರಷ್ಟು ವೇತನ ಹೆಚ್ಚಳವಾಗಿದೆ. ಪ್ರತಿ ಏಪ್ರಿಲ್ನಲ್ಲಿ ನೌಕರರ ವರ್ಗಾವಣೆಗೆ ಕ್ರಮ ವಹಿಸಿದ್ದೇವೆ. ಕಳೆದ ವರ್ಷ ಸಾರಿಗೆ ಇಲಾಖೆಗೆ 4 ಸಾವಿರ ಕೋಟಿ ರೂ. ನಷ್ಟವಾಗಿದೆ. ಸಾರಿಗೆ ಇಲಾಖೆಗೆ ಸರ್ಕಾರ 3,200 ಕೋಟಿ ನೆರವು ನೀಡಿದೆ. ಸರ್ಕಾರ ನೀಡಿರುವ ನೆರವು ನೌಕರರು ನೆನಪಿನಲ್ಲಿಡಬೇಕು ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post