ಬೆಂಗಳೂರು: ರಾಜ್ಯ ಸರ್ಕಾರ ಇಂದು ರಾಜ್ಯದ ಹಲವು ನಗರಗಳಲ್ಲಿ ಕೊರೊನಾ ಕರ್ಫ್ಯೂವನ್ನ ಜಾರಿ ಮಾಡಿದೆ. ನೈಟ್ ಕರ್ಫ್ಯೂವನ್ನೇ ಪ್ರಧಾನಿ ಮೋದಿ ಕೊರೊನಾ ಕರ್ಫ್ಯೂ ಎಂದಿದ್ದಾರೆ. ಕೊರೊನಾ ಕರ್ಫ್ಯೂ ರಾಜ್ಯದ 8 ನಗರಗಳಲ್ಲಿ ಪ್ರಾಯೋಗಿಕವಾಗಿ ಇದೇ ಏಪ್ರಿಲ್ 10 ರಿಂದ 20ರ ವರೆಗೆ ಜಾರಿಯಾಗಲಿದೆ.
ಬೆಂಗಳೂರು, ಮೈಸೂರು, ಮಂಗಳೂರು, ಕಲ್ಬುರ್ಗಿ, ಉಡುಪಿ- ಮಣಿಪಾಲ್, ಬೀದರ್, ತುಮಕೂರು ನಗರಗಳಲ್ಲಿ ಕೊರೊನಾ ಕರ್ಫ್ಯೂ ಜಾರಿಯಾಗಲಿದ್ದು ಈ ಸಮಯದಲ್ಲಿ ಕರ್ಫ್ಯೂ ಜಾರಿಯಾದ ನಗರಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೂ ಸಂಪೂರ್ಣ ವಾಣಿಜ್ಯ ಚಟುವಟಿಕೆ ಬಂದ್ ಆಗಲಿದೆ.
ಹೊಟೇಲ್‌ಗಳು, ಮಾಲ್‌ಗಳು, ಸಿನಿಮಾ ಮಂದಿರಗಳು, ಅಗತ್ಯ ವಸ್ತುಗಳ ಅಂಗಡಿ-ಮುಗ್ಗಟ್ಟು ಹೊರತುಪಡಿಸಿ ಬಾಕಿ ಎಲ್ಲಾ, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಸಭೆ- ಸಮಾರಂಭಗಳು ಎಲ್ಲವೂ ಸಂಪೂರ್ಣ ಬಂದ್ ಆಗಲಿದೆ. ಈ ಸಮಯದಲ್ಲಿ ಜನ ರಸ್ತೆಯಲ್ಲಿ ಓಡಾಡಬಾರದು. ಪ್ರಯಾಣಿಕರು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಬಹುದು. ಕೊರೊನಾ ಕರ್ಫ್ಯೂ ಸಂದರ್ಭದಲ್ಲಿ ಜನಕ್ಕೆ ತೊಂದರೆಯಾಗದಂತೆ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಲಾಗುವುದು ಎನ್ನಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post