ನವದೆಹಲಿ: ದೇಶದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ 11 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿದರು. ವಿಡಿಯೋ ಸಂವಾದದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ.. ನೈಟ್ ಕರ್ಫ್ಯೂವನ್ನೇ ಇನ್ನು ಮುಂದೆ ಕೊರೊನಾ ಕರ್ಫ್ಯೂ ಎಂದು ಪರಿಗಣಿಸಿ ಎಂದು ಕರೆಕೊಟ್ಟರು.
ನಾನು ಸೂಕ್ಷ್ಮ ಕಂಟೈನ್ಮೆಂಟ್ ಜೋನ್ಗಳ ಬಗ್ಗೆ ಹೆಚ್ಚು ನಿಗಾವಹಿಸಬೇಕಿದೆ. ಎಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿದೆಯೋ ಅಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ನೈಟ್ ಕರ್ಫ್ಯೂವನ್ನು ಕೊರೊನಾ ಕರ್ಫ್ಯೂ ಎಂದು ಕರೆಯಲು ಒತ್ತಾಯಿಸುತ್ತೇನೆ. ನೈಟ್ ಕರ್ಫ್ಯೂ ಸಮಯವನ್ನು ರಾತ್ರಿ 9 ಅಥವಾ 10ರಿಂದ ಬೆಳಗ್ಗೆ 5 ರಿಂದ 6 ಗಂಟೆಯವರೆಗೆ ಜಾರಿಗೊಳಿಸುವುದು ಉತ್ತಮ ಎಂದು ಸಲಹೆ ನೀಡಿದ್ರು.
ಇದನ್ನೂ ಓದಿ: ‘ಕೊರೊನಾ ಕರ್ಫ್ಯೂ’ ಇರಲಿ, ಸಂಪೂರ್ಣ ಲಾಕ್ಡೌನ್ ಅಗತ್ಯ ಇಲ್ಲ- ಪ್ರಧಾನಿ ಮೋದಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post