ನವದೆಹಲಿ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, 11 ರಾಜ್ಯಗಳ ಸಿಎಂ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಸಿಎಂಗಳ ಜೊತೆ ರಾಜ್ಯದಲ್ಲಿನ ಕೊರೊನಾ ಸ್ಟೇಟಸ್ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ದೇಶದ ಜನರನ್ನ ಉದ್ದೇಶಿಸಿ ಮಾತನಾಡಿದರು.
ಮೋದಿ ಹೇಳಿದ್ದೇನು..?
- ಕೊರೊನಾ ಹೆಚ್ಚಳದಿಂದಾಗಿ ಮತ್ತೆ ನಮಗೆ ಸವಾಲ್ ಎದುರಾಗಿದೆ
- ಕೊರೊನಾ ಎದುರಿಸಲು ನಿಮ್ಮೆಲ್ಲರ ಸಲಹೆಯನ್ನ ನಾನು ಈ ಸಂದರ್ಭದಲ್ಲಿ ಕೇಳುತ್ತೇನೆ
- ಕೊರೊನಾ ತಡೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ
- ಕೊರೊನಾ ತಡೆಗಟ್ಟಲು ಸಮರೋಪಾದಿಯಲ್ಲಿ ಕೆಲಸ ಮಾಡುವುದು ಅವಶ್ಯಕ
- ಎಲ್ಲಾ ಸವಾಲುಗಳ ಹೊರತಾಗಿಯೂ, ನಮಗೆ ಹಿಂದೆಂದಿಗಿಂತಲೂ ಉತ್ತಮ ಅನುಭವ ಮತ್ತು ಸಂಪನ್ಮೂಲಗಳಿವೆ, ನಮ್ಮಲ್ಲಿ ಲಸಿಕೆ ಕೂಡ ಇದೆ
- ಮಹಾರಾಷ್ಟ್ರ, ಗುಜರಾತ್, ಛತ್ತೀಸ್ಗಢ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿದೆ
- ಮೊದಲನೇ ಅಲೆಯಂತೆ ಕೊರೊನಾ ಪ್ರಕರಣ ಹೆಚ್ಚುತ್ತಿದೆ, ಈ ಬಗ್ಗೆ ನಾವು ಎಚ್ಚರ ವಹಿಸಬೇಕಿದೆ
- ಇಂತಹ ತುರ್ತು ಸಂದರ್ಭವನ್ನ ನಾವು ಸವಾಲ್ ಆಗಿ ಸ್ವೀಕಾರ ಮಾಡಬೇಕಿದೆ
- COVID19 ಪರೀಕ್ಷೆಗೆ ಒತ್ತು ನೀಡುವಂತೆ ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ, 70% ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡುವುದು ನಮ್ಮ ಗುರಿಯಾಗಬೇಕು
- ಕೊರೊನಾ ಪರೀಕ್ಷೆಯನ್ನ ಗರಿಷ್ಠ ಮಟ್ಟದಲ್ಲಿ ಮಾಡಬೇಕಿದೆ. ಸರಿಯಾದ ಮಾದರಿಯಲ್ಲಿ ಸಂಗ್ರಹ ಮಾಡೋದು ಬಹಳ ಮುಖ್ಯ.
- ಕೊರೊನಾದ 2ನೇ ಅಲೆ ಅಪಾಯಕಾರಿ; ಶೇ. 70 RTPCR ಪರೀಕ್ಷೆ ಗುರಿಯಾಗಲಿ
- ಕೊರೊನಾ ಸೋಂಕು ತಡೆಯುವ ಮಾರ್ಗ ಅಂದ್ರೆ ಅದುವೇ ಅದನ್ನ ಪತ್ತೆ ಹಚ್ಚುವಿಕೆ ಮತ್ತು ಟ್ರ್ಯಾಕಿಂಗ್ಗೆ ಹೆಚ್ಚು ಒತ್ತು ನೀಡಬೇಕು
- ಕಂಟೋನ್ಮೆಂಟ್ ಝೋನ್ ಮತ್ತು ಸೂಕ್ಷ್ಮ ವಲಯಗಳತ್ತ ನಾವು ಗಮನ ಹರಿಸಬೇಕು. ನೈಟ್ ಕರ್ಫ್ಯೂ ವಿಧಿಸಲಾಗಿರುವ ಸ್ಥಳಗಳಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತರಾಗಿರಬೇಕು
- ಕೊರೊನಾ ವಿರುದ್ಧದ ಜಾಗರೂಕತೆಯನ್ನ ಮುಂದುವರಿಸಲು ನಾನು ಕೊರೊನಾ ಕರ್ಫ್ಯೂ ಪದವನ್ನ ಬಳಸಲು ಒತ್ತಾಯಿಸುತ್ತೇನೆ
- ರಾತ್ರಿ 9 ಅಥವಾ ರಾತ್ರಿ 10 ರಿಂದ ಬೆಳಗ್ಗೆ 5 ಅಥವಾ 6 ರವರೆಗೆ ಕರ್ಫ್ಯೂ ಸಮಯವನ್ನು ಪ್ರಾರಂಭಿಸುವುದು ಉತ್ತಮ, ಜಾಗೃತಿಗಾಗಿ ನೈಟ್ ಕರ್ಫ್ಯೂವನ್ನ, ಕೊರೊನಾ ಕರ್ಫ್ಯೂ ಎಂದೇ ಬಳಸೋದು ಸೂಕ್ತ
- ಸಂಪೂರ್ಣ ಲಾಕ್ಡೌನ್ ಅಗತ್ಯ ಇಲ್ಲ, ಏಪ್ರಿಲ್ 11 ರಿಂದ 14ರವರೆಗೆ ವ್ಯಾಕ್ಸಿನ್ ಉತ್ಸವವನ್ನ ಆಚರಿಸಿ
- ಎಲ್ಲಾ ರಾಜ್ಯಗಳ ಸಿಎಂ ಜೊತೆಗಿನ ಚರ್ಚೆಯಲ್ಲಿ ಸಾವಿನ ಪ್ರಮಾಣದ ಬಗ್ಗೆ ಚರ್ಚೆ ಮಾಡಲಾಯಿತು, ಸಾವಿನ ಪ್ರಮಾಣವನ್ನ ಮತ್ತಷ್ಟು ಕಡಿಮೆ ಮಾಡಲು ಚರ್ಚೆ ನಡೆಯಿತು
- ದೇಶದ ಸೆಲೆಬ್ರಿಟಿಗಳು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಕೊರೊನಾ ವಿರುದ್ಧದ ಯುದ್ಧದಲ್ಲಿ ಪಾಲ್ಗೊಳ್ಳಬೇಕು
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post