ನವದೆಹಲಿ: ಇಂದು 11 ರಾಜ್ಯಗಳ ಸಿಎಂಗಳ ಜೊತೆಗೆ ಕೊರೊನಾ ಸೋಂಕಿನ ನಿಯಂತ್ರಣ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ ಪ್ರಧಾನಿ ಮೋದಿ ನಂತರ ದೇಶವನ್ನುದ್ದೇಶಿಸಿ ಮಾತನಾಡಿರು. ಈ ವೇಳೆ ಏಪ್ರಿಲ್ 11 ರಿಂದ 14 ರವರೆಗೆ ದೇಶದಾದ್ಯಂತ ವ್ಯಾಕ್ಸಿನ್ ಉತ್ಸವ ನಡೆಯಲಿದೆ ಎಂದು ಹೇಳಿದ್ರು.
ಈ ನಾಲ್ಕು ದಿನಗಳಲ್ಲಿ ದೇಶದ ಜನರಿಗೆ ವ್ಯಾಕ್ಸಿನ್ ಕುರಿತು ಅರಿವು ಮೂಡಿಸಬೃಕು. ವ್ಯಾಕ್ಸಿನೇಷನ್ ಪ್ರತಿಯೊಬ್ಬರಿಗೂ ತಲಪುವಂತೆ ಮಾಡಬೇಕು. ರಾಜ್ಯಗಳು 45 ವರ್ಷ ಮೇಲ್ಪಟ್ಟ ಎಲ್ಲರಿಗೂ 100 ಪರ್ಸೆಂಟ್ ವ್ಯಾಕ್ಸಿನ್ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಅಲ್ಲದೇ ಯುವ ಸಮುದಾಯ ಸ್ವಯಂ ಪ್ರೇರಿತರಾಗಿ ಹೊರಬಂದು ಈ ವ್ಯಾಕ್ಸಿನ್ ಉತ್ಸವದ ನೇತೃತ್ವ ವಹಿಸಿಕೊಳ್ಳಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post