ಕೇರಳ: ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಭದ್ರಕಾಳಿ ದೇವಾಲಯದಲ್ಲಿ ವಿಗ್ರಹದ ಪ್ರಾಣಪ್ರತಿಷ್ಠೆ ನಡೆಸಿದ ಮೊದಲ ಮಹಿಳಾ ತಂತ್ರಿಯೊಬ್ಬರಿಗೆ ಮಹಾತ್ಮಗಾಂಧಿ ಯೂನಿವರ್ಸಿಟಿ ಱಂಕ್ ನೀಡಿ ಗೌರವಿಸಿದೆ. ಜ್ಯೋತ್ಸ್ನಾ ಪದ್ಮನಾಭನ್ ಱಂಕ್ ಪಡೆದ ವಿದ್ಯಾರ್ಥಿನಿ.
ಇದೊಂದು ಅಚ್ಚರಿಯ ಜೊತೆಗೆ ಮಹಿಳೆಯರಿಗೆ ಗೌರವದ ಸುದ್ದಿ. ಮಹಿಳೆಯರಿನ್ನೂ ಕಾಲಿಡದ ತಂತ್ರ ವಿದ್ಯಾಕ್ಷೇತ್ರಕ್ಕೆ ಕಾಲಿಟ್ಟ ಮೊದಲ ವನಿತೆಯೊಬ್ಬರ ದಿಟ್ಟ ಸಾಧನೆಯ ಕತೆ ಇದು. ಕೇರಳದ ಕಣ್ಣೂರು ಜಿಲ್ಲೆಯ ಆಯಿಕ್ಕೋಡ್ ಅಕ್ಕೀಯತ್ ಶಿವಾಲಯದ ತಂತ್ರಿ ತರಣನಲ್ಲೂರ್ ಪದ್ಮನಾಭನ್ ಅಪ್ಪು ನಂಬೂದಿರಿ ಮತ್ತು ಅರ್ಚನಾರ ಪುತ್ರಿಯಾದ ಈ ಸಾಧನೆ ಮಾಡಿದ್ದಾರೆ. ಕೇರಳದ ಕಲ್ಲಿಕೋಟೆಯಲ್ಲಿ ಮಹಾತ್ಮಗಾಂಧಿ ಯೂನಿವರ್ಸಿಟಿ ನಡೆಸಿದ ಸಂಸ್ಕೃತ ವೇದಾಂತದಲ್ಲಿ ಜ್ಯೋತ್ಸ್ನಾ ಪದ್ಮನಾಭನ್ ಈ ವರ್ಷದ ಱಂಕ್ ಮುಡಿಗೇರಿಸಿಕೊಂಡಿದ್ದಾರೆ. ವೇದಾಂತದಲ್ಲಿ ಉನ್ನತ ಶಿಕ್ಷಣಗಳಿಸಿ ಇದೇ ರಂಗದಲ್ಲಿ ಸಂಶೋಧನೆ ನಡೆಸಬೇಕೆಂಬ ಗುರಿಯನ್ನ ಜ್ಯೋತ್ಸ್ನಾ ಹೊಂದಿದ್ದಾರೆ.
ಪ್ರಾಣಪ್ರತಿಷ್ಠಾಪಿಸಿದ ದೇಶದ ಮೊದಲ ಮಹಿಳಾ ತಂತ್ರಿಗೆ ವೇದಾಂತದಲ್ಲೂ ಱಂಕ್ https://t.co/EpsLTHrag8 #newsfirstlive pic.twitter.com/8eSIYJLS4S
— NewsFirst Kannada (@NewsFirstKan) April 12, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post