ಬೆಳಗಾವಿ/ಬೀದರ್: ರಾಜ್ಯದಲ್ಲಿ ನಡೆಯುತ್ತಿರುವ ಎರಡು ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಬಿರುಸಿನಿಂದ ಆರಂಭವಾಗಿದೆ.
ಬೆಳಗಾವಿಯಲ್ಲಿ ಬೆಳಂಬೆಳಗ್ಗೆ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರು ಮತದಾನ ಕೇಂದ್ರಕ್ಕೆ ಆಗಮಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ವಿಶ್ವೇಶ್ವರಯ್ಯ ನಗರದ ಸರ್ಕಾರಿ ಶಾಲೆ ಮತಗಟ್ಟೆ-03 ರಲ್ಲಿ ಮಂಗಳಾ ಅಂಗಡಿ ಮತದಾನ ಮಾಡಿದ್ದು, ಈ ವೇಳೆ ಅವರಿಗೆ ಪುತ್ರಿಯರು ಸಾಥ್ ನೀಡಿದರು.
ಇತ್ತ ರಾಯಚೂರಿನ ಮಸ್ಕಿಯಲ್ಲೂ ಮತದಾನ ಬಿರುಸಿನಿಂದ ಆರಂಭವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರವಿಹಾಳ ಅವರು ತುರವಿಹಾಳ ಪಟ್ಟಣದ 217ರ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಕೊರೊನಾ ಸೋಂಕು ತಗುಲಿರೋದ್ರಿಂದ ಅವರು ಸಂಜೆ 6 ಗಂಟೆ ಬಳಿಕ ಮತದಾನ ಮಾಡಲಿದ್ದಾರೆ. ಬೆಳಗ್ಗೆ ಮತಕೇಂದ್ರಕ್ಕೆ ಆಗಮಿಸಿದ ಪ್ರತಾಪ್ ಗೌಡ ಪಾಟೀಲ್ ಅವರ ಪುತ್ರಿ ಪ್ರೀತಿ ಹಾಗೂ ಪತ್ನಿ ಪದ್ಮಾವತಿ, ಪುತ್ರರಾದ ವಿನಾಯಕ ಪಾಟೀಲ್, ಪ್ರಸನ್ನ ಪಾಟೀಲ್, ಚೇತನ ಪಾಟೀಲ್ ಮತ್ತು ಸೊಸೆಯರಾದ ವರ್ಷ ಪಾಟೀಲ್ ಹಾಗೂ ರಾಜೇಶ್ವರಿ ಪಾಟೀಲ್ ಮತದಾನ ಮಾಡಿದರು.
ಬೀದರ್ನ ಬಸವಕಲ್ಯಾಣ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ ಅವರು ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರರ ದರ್ಶನ ಪಡೆದು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಬಸವಕಲ್ಯಾಣ ನಗರದ ಎಪಿಎಂಸಿ ಯಾರ್ಡ್ನ ಮತಗಟ್ಟೆ ಸಂಖ್ಯೆ 99/ಎ ನಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post