ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಇಂದು ಉಪಚುನಾವಣೆ ನಡೆಯುತ್ತಿದ್ದು, ನವ ಜೋಡಿಗಳು ಮದುವೆ ಸಂಭ್ರಮದಲ್ಲಿಯೇ ಬಂದು ಮತದಾನ ಮಾಡಿ ಜಾಗೃತಿ ಮೂಡಿಸಿದರು.
ಸುಮಿತ್ ಅಷ್ಟೇಕರ್, ಸ್ಮೀತಾ ವೋಟ್ ಮಾಡಿದ ನವ ದಂಪತಿ. ಹಸೆಮಣೆಯಿಂದ ನೇರವಾಗಿ ಬಂದು ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಕಲ್ಯಾಣ ಮಂಟಪದಿಂದ ಅಕ್ಷತೆ ಕಾರ್ಯ ಮುಗಿಸಿಕೊಂಡು ನೇರವಾಗಿ ಮತಗಟ್ಟೆಗೆ ಆಗಮಿಸಿದರು.
ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post