ಬೆಂಗಳೂರು: ಕೊರೊನಾ ಸೋಂಕಿಗೆ ರಾಮಬಾಣ ಎನ್ನಲಾಗ್ತಿದ್ದ ರೆಮ್ಡೆಸಿವಿರ್ ಔಷಧಿಗೆ ರಾಜ್ಯದಲ್ಲಿ ಡಿಮ್ಯಾಂಡ್ ತಗ್ಗಿದೆ ಎಂದು ಹೇಳಲಾಗ್ತಿದೆ. ಕೇವಲ ಹದಿನೈದು ದಿನಗಳಲ್ಲೇ ರೆಮ್ಡೆಸಿವಿರ್ ಬೇಡಿಕೆ ಕಡಿಮೆಯಾಗಿದೆ.
ಈ ಹಿಂದೆ ಸೋಂಕಿತರಿಗೆ ಸೂಕ್ತ ಸಮಯದಲ್ಲಿ ರೆಮ್ಡೆಸಿವಿರ್ ಔಷಧಿ ಸಿಗದೇ ಒದ್ದಾಡುತ್ತಿದ್ರು. ಧನದಾಹಿಗಳು ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಔಷಧಿಯನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡ್ತಿದ್ದ ಪ್ರಕರಣಗಳೂ ಬೆಳಕಿಗೆ ಬಂದಿದ್ವು. ಹೀಗಾಗಿ ಆರೋಗ್ಯ ಇಲಾಖೆ ಹೆಲ್ಪ್ಲೈನ್ ತೆರೆದು, ಒಂದೇ ಒಂದು ವಯಲ್ ಔಷಧಿಯೂ ಮಿಸ್ ಆಗದಂತೆ ಬಿಗಿ ಕ್ರಮ ಮಾಡಲಾಗಿತ್ತು.
ಆದ್ರೆ ಅನಂತರ ಸರ್ಕಾರ ರೆಮ್ಡೆಸಿವಿರ್ ಕೊರೊನಾಗೆ ಸೂಕ್ತ ಮದ್ದಲ್ಲ ಅಂತಾ ಹೇಳಿತ್ತು. ಐಸಿಎಂಆರ್ ಕೂಡ ಇದೇ ರೀತಿ ಹೇಳಿತ್ತು. ಇದರಿಂದ ರೆಮ್ಡೆಸಿವಿರ್ ಔಷಧಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಆದ್ರೆ ಔಷಧಿಯ ಪೂರೈಕೆ ಹೆಚ್ಚಾಗಿದೆ.
77 ಸಾವಿರ ವಯಲ್ಸ್ ರೆಮ್ಡೆಸಿವಿರ್ ಲಭ್ಯ
ಸದ್ಯ ರಾಜ್ಯದಲ್ಲಿ 77 ಸಾವಿರದ 59 ರೆಮ್ಡೆಸಿವಿರ್ ವಯಲ್ಸ್ ಇವೆ. ಕಂಪನಿಗಳು ರೆಮ್ಡೆಸಿವಿರ್ ಔಷಧಿಯನ್ನ ಓಪನ್ ಮಾರ್ಕೆಟ್ಗೆ ಬಿಟ್ಟ ಬಗ್ಗೆ ನ್ಯೂಸ್ ಫಸ್ಟ್ ವರದಿ ಮಾಡಿತ್ತು. ಪ್ರೊಡಕ್ಷನ್ ಹೆಚ್ಚಳ ಮಾಡಿ ಸಪ್ಲೈ ಮಾಡಲು ಸರ್ಕಾರ ಈ ಸಂಸ್ಥೆಗಳಿಗೆ ಸೂಚಿಸಿತ್ತು. ಈಗ ಕಂಪನಿಗಳು ಸಪ್ಲೈ ಮಾಡಲು ಸಂಪೂರ್ಣ ಸಿದ್ದವಾಗಿವೆ. ಆದ್ರೆ ರೆಮ್ಡೆಸಿವಿರ್ಗೆ ಡಿಮ್ಯಾಂಡ್ ಕಡಿಮೆಯಾಗಿದೆ. ಕೇವಲ 6 ತಿಂಗಳಲ್ಲಿ ಈ ಔಷಧದ ಅವಧಿ ಮೀರಿ ಹೋಗುತ್ತೆ. ಈಗ ಸ್ಟಾಕ್ ಇದ್ರು ಡಿಮ್ಯಾಂಡ್ ಇಲ್ಲ ಅಂತಿದ್ದಾರೆ ಆರೋಗ್ಯಾಧಿಕಾರಿಗಳು
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post