ಬಾಲಿವುಡ್ನಲ್ಲಿ ಒಂದು ಕಾಲದಲ್ಲಿ ಯುವಕರ ಹೃದಯಕ್ಕೆ ಬೆಂಕಿ ಹಚ್ಚಿದ್ದ ಮಾದಕ ನಟಿ ಮಲ್ಲಿಕಾ ಶೆರಾವತ್ ಇತ್ತೀಚೆಗೆ ಕಣ್ಮರೆಯೇ ಆಗಿಹೋಗಿದ್ದಾರೆ. ಈ ಮಧ್ಯೆ ತಮ್ಮ ಮೊಟ್ಟ ಮೊದಲ ಸಿನಿಮಾ ಮರ್ಡರ್ ಚಿತ್ರದ ಬಗ್ಗೆ ಮಾತನಾಡಿರುವ ಮಲ್ಲಿಕಾ ಶೆರಾವತ್, ಆ ಸಿನಿಮಾದ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ಜನರು ನನ್ನನ್ನ ನೈತಿಕವಾಗಿ ಕೊಂದೇಬಿಟ್ಟಿದ್ದರು ಎಂದು ಹೇಳಿಕೊಂಡಿದ್ದರು.
ಮರ್ಡರ್ ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್ ಸಖತ್ ಹಾಟ್ ಸೀನ್ಗಳಲ್ಲಿ ಕಾಣಿಸಿಕೊಂಡಿದ್ದರು. ರೊಮ್ಯಾಂಟಿಕ್ ಸಿನಿಮಾಗಳನ್ನ ನೋಡುವ ಮಂದಿ ಮರ್ಡರ್ ಸಿನಿಮಾವನ್ನ ಚಪ್ಪರಿಸಿದ್ದರು. ಆಗ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಯಾವ ನಟಿಯೂ ಇಷ್ಟಪಡುತ್ತಿರಲಿಲ್ಲ. ಆದ್ರೆ ಈಗ ಅಂಥ ದೃಶ್ಯಗಳು ಸಿನಿಮಾಗಳಲ್ಲಿ ಬಹುತೇಕ ಸಾಮಾನ್ಯ ಎನ್ನುವಂತಾಗಿದೆ ಎಂದು ಮಲ್ಲಿಕಾ ಶೆರಾವತ್ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ ತಮ್ಮ ಮುಂದಿನ ಕೆರಿಯರ್ ಬಗ್ಗೆಯೂ ಹೇಳಿಕೆ ನೀಡಿರುವ ಅವರು, ನಾನು ಅರ್ಥಪೂರ್ಣ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಚ್ಛಿಸುತ್ತೇನೆ. ಅಂಥ ಪಾತ್ರಗಳನ್ನ ನಾನು ಮಿಸ್ ಮಾಡಿಕೊಳ್ತಿದ್ದೇನೆ. ಜನರು ಗ್ಲಾಮರಸ್ ರೋಲ್ಗಾಗಿ ನನ್ನನ್ನು ಸಂಪರ್ಕಿಸುತ್ತಿದ್ದಾರೆ. ಅದಕ್ಕೆ ಸಾಕಷ್ಟು ಹಣವನ್ನೂ ಖರ್ಚು ಮಾಡಲು ತಯಾರಿದ್ದಾರೆ. ಆದರೆ ಆ ಪಾತ್ರಗಳಲ್ಲಿ ಆತ್ಮವಾಗಲಿ ಅರ್ಥವಾಗಲಿ ಇಲ್ಲ. ಸಣ್ಣ ಗ್ಯಾಪ್ ತೆಗೆದುಕೊಂಡ ನಂತರ ನಮ್ಮನ್ನು ಹೊಸತಾಗಿ ಪರಿಚಯಿಸಿಕೊಳ್ಳುವುದು ಮುಖ್ಯವಾಗುತ್ತದೆ. ನಾನು ಹಿಂದೆ ಮಾಡಿದ ಪಾತ್ರಗಳನ್ನೇ ಮುಂದುವರೆಸಿದ್ರೆ ನಿಮಗೆ ವಿಂಟೇಜ್ ಮಲ್ಲಿಕಾ ಮಾತ್ರವೇ ಸಿಗುತ್ತಾಳೆ ಎಂದು ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post