ನವದೆಹಲಿ: ಮತ್ತೆ ಮತ್ತೆ ಭಾರತದ ಮ್ಯಾಪ್ನ, ಲೊಕೇಷನ್ಗಳನ್ನು ತಪ್ಪು ತಪ್ಪಾಗಿ ತೋರಿಸುವ ಮೂಲಕ ಜನರ ಆಕ್ರೋಶಕ್ಕೆ ಟ್ವಿಟರ್ ಗುರಿಯಾಗುತ್ತಿದೆ. ಹಿಂದೊಮ್ಮೆ ಲಡಾಖ್ನ್ನು ಚೀನಾದ ಭಾಗವೆಂದು ತೋರಿಸಿದ್ದ ಟ್ವಿಟರ್ ಇದೀಗ ಭಾರತದ ನಕಾಶೆಯಿಂದ ಜಮ್ಮು ಕಾಶ್ಮೀರವನ್ನೇ ತೆಗೆದುಹಾಕಿರುವ ಚಿತ್ರವನ್ನ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿತ್ತು. ಇದೀಗ ತನ್ನ ತಪ್ಪನ್ನ ತಿದ್ದಿಕೊಂಡು ತಾನು ಹಂಚಿಕೊಂಡಿದ್ದ ಚಿತ್ರವನ್ನೇ ವೆಬ್ಸೈಟ್ನಿಂದ ತೆಗೆದುಹಾಕಿದೆ.
ಕೆರಿಯರ್ಸ್ ಡಾಟ್ ಟ್ವಿಟರ್ ಡಾಟ್ಕಾಮ್ ವೆಬ್ಸೈಟ್ನಲ್ಲಿ ಟ್ವಿಟರ್ ಜಮ್ಮು ಕಾಶ್ಮೀರವೇ ಇರದ ಭಾರತದ ನಕಾಶೆಯನ್ನ ಪ್ರಕಟಿಸಿತ್ತು. ಕೇಂದ್ರ ಸರ್ಕಾರದ ನಾಯಕರಾದಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ವಿಟರ್ ವಿರುದ್ಧ ದೊಡ್ಡ ಮಟ್ಟದ ಆಕ್ರೋಶವೇ ವ್ಯಕ್ತವಾಗಿತ್ತು. ಇದರ ಪರಿಣಾಮ ಎಂಬಂತೆ ಟ್ವಿಟರ್ ತನ್ನ ಕೆರಿಯರ್ಸ್ ಡಾಟ್ ಟ್ವಿಟರ್ ಡಾಟ್ಕಾಮ್ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದ ಚಿತ್ರವನ್ನೇ ತೆಗೆದುಹಾಕಿದೆ.
ಇದನ್ನೂ ಓದಿ: ಭಾರತದ ವಿರುದ್ಧ ಮುಂದುವರೆದ ದಾಳಿ; ಈ ಬಾರಿ ಜಮ್ಮು ಕಾಶ್ಮೀರವನ್ನೇ ಬೇರೆ ಮಾಡಿದ ಟ್ವಿಟರ್
ಮತ್ತೆ ಮತ್ತೆ ತಪ್ಪು ಮಾಡುತ್ತಿರುವ ಟ್ವಿಟರ್ ತನ್ನ ತಪ್ಪನ್ನು ತಿದ್ದಿಕೊಳ್ಳುವುದಷ್ಟೇ ಅಲ್ಲ.. ಭಾರತೀಯರ ಕ್ಷಮೆಯನ್ನೂ ಯಾಚಿಸಬೇಕೆಂದು ಕೆಲವರು ಒತ್ತಾಯಿಸಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಹದ್ದುಮೀರಿದ ಟ್ವಿಟರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post