ಬೆಂಗಳೂರು: ಜೆಸಿ ನಗರ ಮತ್ತು ಸಂಜಯನಗರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಓರ್ವ ನೈಜೀರಿಯನ್ ಪ್ರಜೆ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 60 ಗ್ರಾಂ ವೀಡ್ ಆಯಿಲ್, 1.1ಕೆಜಿ ಗಾಂಜಾ, 2.8 ಗ್ರಾಂ ಕೊಕೇನ್ ಸೇರಿದಂತೆ 2 ಕಾರು, 2 ಲ್ಯಾಪ್ಟಾಪ್ಗಳನ್ನು ಜಪ್ತಿ ಮಾಡಿದ್ದಾರೆ.
ನೈಜಿರಿಯನ್ ಮೂಲದ ನ್ವಾನ್ಯಾ ಫ್ರಾನ್ಸಿಸ್ ಬೋರ್ಟೆಂಗ್ ಎಂಬಾತನೇ ಈ ಜಾಲದ ಕಿಂಗಪಿನ್ ಆಗಿದ್ದಾನೆ ಎನ್ನಲಾಗಿದೆ. ವಿದ್ಯಾಭ್ಯಾಸದ ವೀಸಾದಡಿಯಲ್ಲಿ ಬೆಂಗಳೂರಿಗೆ ಬಂದಿದ್ದ. ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿದ್ದ ಎನ್ನಲಾಗಿದೆ.
ನಗರದ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಹೋಟೆಲ್ ಬಿಸಿನೆಸ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿದ್ದ. ಕಮ್ಮನಹಳ್ಳಿಯ ಪ್ರದೀಪ ಎಂಬಾತ ಈತನನ್ನು ಸೇರಿಕೊಂಡು ಡಾರ್ಕ್ವೆಬ್ ಮತ್ತು ವಿಕ್ಕರ್ ಮೆಸೆಂಜರ್ ಮೂಲಕ ಡ್ರಗ್ ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ. ಬಳಿಕ ಕಾಲೇಜು ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಇವರು, ತನ್ನ ಕಾಲೇಜು ಮತ್ತು ಹತ್ತಿರದ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು.
ಅಷ್ಟೇ ಅಲ್ಲದೇ ಡ್ರಗ್ ಪೆಡ್ಲರ್ ಕೂಡ ಆಗಿದ್ದ ಈತ ನಗರದ ರೆಡ್ ಬಸ್ ಕಂಪನಿಯಲ್ಲಿ ಕೆಲಸ ಕೂಡ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಪ್ರಕರಣದಡಿಯಲ್ಲಿ 10 ವಿದ್ಯಾರ್ಥಿಗಳನ್ನು ಸಹ ಕಸ್ಟಡಿಗೆ ತೆಗೆದುಕೊಂಡಿರುವ ಉತ್ತರ ವಿಭಾಗ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post