ಕೇಂದ್ರ ಸರ್ಕಾರದಲ್ಲಿ ಮತ್ತೊಂದು ಹೊಸ ಮಿನಿಸ್ಟ್ರಿ ಕ್ರಿಯೇಟ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿವಿಧ ಇಲಾಖೆ, ವಿವಿಧ ಕ್ಷೇತ್ರಗಳ ನಡುವೆ ಸಮನ್ವಯತೆ ಸಾಧಿಸುವುದಕ್ಕಾಗಿ ಈ ಮಿನಿಸ್ಟ್ರಿಯನ್ನು ಕ್ರಿಯೇಟ್ ಮಾಡಿದೆ ಅಂತಾ ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಪ್ರಧಾನ ಮಂತ್ರಿ ಸಂಪುಟಕ್ಕೆ ಇಂದು ಹಲವರು ಸೇರ್ಪಡೆಯಾಗುತ್ತಿದ್ದಾರೆ, ಈ ನಡುವೆ ಮಿನಿಸ್ಟ್ರಿ ಆಫ್ ಕೋ-ಆಪರೇಷನ್ ಅನ್ನು ಕೂಡ ಕೇಂದ್ರ ಸರ್ಕಾರ ಪರಿಚಯಿಸಿದೆ.
ಸಹಕಾರದಿಂದ ಸಮೃದ್ಧಿ ಅನ್ನೋ ಮಂತ್ರದೊಂದಿಗೆ ಈ ಮಿನಿಸ್ಟ್ರಿಯನ್ನು ಸ್ಥಾಪನೆ ಮಾಡಲಾಗಿದ್ದು, ಇದು ದೇಶದಲ್ಲಿ ಸಹಕಾರ ಚಳವಳಿ ಗಟ್ಟಿಗೊಳಿಸಲು ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಸಚಿವಾಲಯದ ಪ್ರಮುಖ ಕಾರ್ಯವೇನು?
- ದೇಶದಲ್ಲಿ ಸಹಕಾರ ಪ್ರಕ್ರಿಯೆ ಅಭಿವೃದ್ಧಿಗೆ ಸಹಯೋಗ
- ಆಡಳಿತಾತ್ಮಕ, ಕಾನೂನಾತ್ಮಕ ಸಹಾಯ ಮತ್ತು ನಿಯಮ ರೂಪಿಸಲು ಸಹಕಾರ
- ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಅಥವಾ ಉದ್ಯಮ ನಿರ್ವಹಣೆ ಮತ್ತು ಸ್ಥಾಪನೆ ಸರಾಗವಾಗಿ ಕಾರ್ಯ ನಿರ್ವಹಿಸಲು ಸಹಕಾರ
- ವಿವಿಧ ರಾಜ್ಯಗಳ ನಡುವಿನ ಸಹಕಾರಿ-ಸಂಸ್ಥೆಗಳ ನಡುವೆ ಸಮನ್ವಯತೆ
- ಈ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ವೇಗ ನೀಡುವುದು ಮತ್ತು ಅಡೆ ತಡೆಗಳು ಬಾರದಂತೆ ಸಮನ್ವಯತೆ ಸಾಧಿಸುವುದು
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post