ತಮಿಳು ಮತ್ತು ಮಲೆಯಾಳಂ ಸಿನಿಮಾಗಳಿಗೆ.. ಸಿನಿಮಾ ನಟರಿಗೆ ರಾಷ್ಟ್ರಮಟ್ಟದಲ್ಲಿ ಬೇಡಿಕೆ ಇದೆ.. ಬಾಲಿವುಡ್ನ ಸ್ಟಿರಿಯೋಟೈಪ್ ಸಿನಿಮಾಗಳಿಂದ ಬೇಸತ್ತ ಸಿನಿ ಅಭಿಮಾನಿ ವಿಭಿನ್ನ ಕಂಟೆಂಟ್ಗಳನ್ನ ಅರಸಿ ದಕ್ಷಿಣದತ್ತ ಮುಖಮಾಡೋದು ಸಾಮಾನ್ಯ. ಅದ್ರಲ್ಲೂ ನೇಟಿವಿಟಿಗೆ ಒತ್ತುಕೊಟ್ಟು ಬದುಕನ್ನ ಇದ್ದಂತೆಯೇ ಕಟ್ಟಿಕೊಡುವ ತಮಿಳು, ಮಲಯಾಳಂ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಹೊಡಿಬಡಿ ಸಿನಿಮಾಗಳಿಗಿಂತ ಹೊರಗಿನ ಜಗತ್ತನ್ನು ಅನಾವರಣಗೊಳಿಸುವ ಇಂಥ ಸಿನಿಮಾಗಳಲ್ಲಿ ಕಾಣಿಸಿಕೊಂಡು ತಮ್ಮ ಅದ್ಭುತ ನಟನೆಯನ್ನ ಪ್ರದರ್ಶಿಸಿ ಸೌತ್ ಸ್ಟಾರ್ಗಳೆನ್ನಿಸಿಕೊಂಡ ಮೂವರು ಇದೀಗ ಒಂದೇ ಸಿನಿಮಾದಲ್ಲಿ ನಟಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಒಬ್ಬರು ಕಮಲ್ ಹಾಸನ್.. ಕಮಲ್ ಹಾಸನ್ ಬಗ್ಗೆ ವಿವರಣೆ ನೀಡುವುದೇ ಬೇಡ.. ದಶಕಗಳಿಂದ ನೂರಾರು ಸಿನಿಮಾಗಳಲ್ಲಿ ನಟಿಸಿ ತಮಿಳಿನ ಸೂಪರ್ ಸ್ಟಾರ್ ಎಂದೇ ಖ್ಯಾತರಾದವರು.. ಮತ್ತೊಬ್ಬರು ವಿಜಯ್ ಸೇತುಪತಿ.. ಸದ್ಯದ ತಮಿಳು ಸಿನಿಮಾರಂಗವನ್ನ ಆಳುತ್ತಿರುವ ಅದ್ಭುತ ನಟ.. ಮಗದೊಬ್ಬರು ಮಲಯಾಳಂ ಸಿನಿಮಾ ರಂಗದತ್ತ ದೇಶದ ಜನರೇ ತಿರುಗಿ ನೋಡುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಫಹಾದ ಫಾಸಿಲ್. ಇಂಥ ಮೂರೂ ದೈತ್ಯರು ಇದೀದ ಒಂದೇ ಸಿನಿಮಾದಲ್ಲಿ ಕಾಣಸಿಕೊಂಡಿದ್ದಾರೆಂದರೆ ಅದು ಹಬ್ಬದೂಟವಲ್ಲದೆ ಮತ್ತೇನೂ ಅಲ್ಲ.
ವಿಕ್ರಮ್ ಹೆಸರಿನ ಸಿನಿಮಾದಲ್ಲಿ ಈ ಮೂವರೂ ನಟರು ಪಾತ್ರಗಳನ್ನ ಹಂಚಿಕೊಂಡಿದ್ದಾರೆ. ಸದ್ಯ ಸಿನಿಮಾದ ಸ್ಟಿಲ್ ಒಂದು ರಿಲೀಸ್ ಆಗಿದ್ದು ಈ ಸ್ಟಿಲ್ನಲ್ಲಿ ಮೂವರೂ ದೈತ್ಯರನ್ನ ಕಂಡ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ಕೈದಿ, ಮಾಸ್ಟರ್ನಂಥ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶಿಸಿದ ಲೋಕೇಶ್ ಕನಗರಾಜ್ ಈ ಸಿನಿಮಾದ ಜವಾಬ್ದಾರಿ ಹೊತ್ತಿದ್ದಾರೆ. ಕಮಲ್ ಹಾಸನ್ ಮತ್ತು ಆರ್. ಮಹೇಂದ್ರನ್ ಈ ಸಿನಿಮಾಗೆ ಹಣ ಹೂಡಿದ್ದಾರೆ. ಸಿನಿಮಾದ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post