ಬೀದರ್: ಮುಂಗಾರು ಮಳೆ ಸೃಷ್ಟಿಸಿದ ಅವಾಂತರಕ್ಕೆ ಗಡಿ ಜಿಲ್ಲೆ ಬೀದರ್ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸತತವಾಗಿ ಸುರಿಯುತ್ತಿರುವ ಮಳೆಗೆ ಸಿರ್ಕಟನಳ್ಳಿ ಸೇರಿ ಹಲವು ಗ್ರಾಮಸ್ಥರು ಹೈರಾಣಾಗಿದ್ದಾರೆ. ಮಳೆಯಿಂದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗ್ತಿದ್ರೆ, ಜೀವದ ಹಂಗು ತೊರೆದು ಜನ ಹಳ್ಳದಾಟುವಂತಾಗಿದೆ.
ಕೊರೊನಾ, ಲಾಕ್ಡೌನ್ನಿಂದ ಈಗಾಗಲೇ ಜನ ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಮಳೆರಾಯನ ಅಬ್ಬರದಿಂದ ಗಡಿ ಜಿಲ್ಲೆ ಬೀದರ್ ಜನ ಕಂಗಾಲಾಗಿದ್ದಾರೆ. ಮಹಾ ಮಳೆಗೆ ಕಬ್ಬು ಬೆಳೆ ಸರ್ವನಾಶವಾಗಿದೆ. ಜೀವನ ನಡೆಸೋಕೂ ಸ್ಥಿತಿ ನಿರ್ಮಾಣವಾಗಿದೆ.
ಹೌದು, ಸತತವಾಗಿ ಸುರಿಯುತ್ತಿರುವ ಮಳೆಗೆ ಸಾಲ ಗೀಲ ಮಾಡಿ ಬೆಳೆದ ಕಬ್ಬು ಬೆಳೆ ನೆಲಸಮವಾಗಿದೆ. ವಿದ್ಯುತ್ ಕಂಬಗಳು, ಮರಗಳು ನೆಲಕ್ಕೆ ಉರುಳಿವೆ. ಅಷ್ಟೇ ಅಲ್ಲ ಔರಾದ್ ತಾಲೂಕಿನ ಜೋಜನಾ ಗ್ರಾಮಸ್ಥರು ಜೀವದ ಹಂಗು ತೊರೆದು ಹಳ್ಳ ದಾಟುವ ಸ್ಥಿತಿ ನಿರ್ಮಿಸಿದೆ. ಇನ್ನೊಂದೆಡೆ ಬೀದರ್ನ ಸಿರ್ಕಟನಳ್ಳಿ ಗ್ರಾಮದ ರೈತ ಜಗನ್ನಾಥ ಪಾಟೀಲ್ರಿಗೆ ಸೇರಿದ ಕಬ್ಬು ನೆಲಕ್ಕಚ್ಚಿದೆ. ಹೀಗಾಗಿ ತಕ್ಷಣವೇ ಜಿಲ್ಲಾಡಳಿತ ತಮ್ಮ ನೆರವಿಗೆ ಬರಬೇಕೆಂದು ರೈತ ಜಗನ್ನಾಥ್ ಒತ್ತಾಯಿಸುತ್ತಿದ್ದಾರೆ.
ಇನ್ನು ಕಬ್ಬು, ತೋಟಗಾರಿಕೆ ಬೆಳೆ ಅಷ್ಟೇ ಅಲ್ಲ. ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರ ಕ್ಷೇತ್ರ ಔರಾದ್ನ ಜೋಜನಾ ಗ್ರಾಮದಲ್ಲೂ ಮಳೆ ಭಾರೀ ಅವಾಂತರ ಸೃಷ್ಟಿ ಮಾಡಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದ್ರೆ ಯಾವುದೇ ಪ್ರಯೋಜನವಾಗಿಲ್ಲ ಅಂತಾ ಗ್ರಾಮಸ್ಥರು ಆರೋಪಿಸ್ತಿದ್ದಾರೆ. ಹೀಗಾಗಿ ಈಗಲಾದ್ರೂ ಹಳ್ಳಕ್ಕೆ ಒಂದು ಸೇತುವೆ ನಿರ್ಮಾಣ ಮಾಡುವ ಕೆಲಸ ಮಾಡಬೇಕು ಅಂತ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಮುಂಗಾರು ಆರಂಭದಲ್ಲೇ ಅನ್ನದಾತರಿಗೆ ಮಳೆರಾಯ ಭಾರೀ ನಷ್ಟವನ್ನುಂಟು ಮಾಡಿದ್ದಾನೆ. ಅದರಲ್ಲೂ ಕಳೆದ ಎರಡ್ಮೂರು ದಿನಗಳಿಂದ ಸುರಿದ ಮಳೆಯಿಂದ ರೈತರು ಬೆಳೆದ ಬೆಳೆ ನೆಲಕ್ಕಚ್ಚಿದೆ. ಇನ್ನೊಂದ್ಕೆಡೆ ಗ್ರಾಮದ ಸೇತುವೆ ಕೊಚ್ಚಿ ಹೋಗಿರೋದು ಗ್ರಾಮಸ್ಥರ ಓಡಾಟಕ್ಕೆ ತೊಂದರೆನ್ನುಂಟು ಮಾಡಿದೆ.
ಇದನ್ನೂ ಓದಿ: ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು- ನಾ ಮುಂದು ತಾ ಮುಂದು ಅಂತಾ ಬಂದವರಿಗೆ ಶಾಕ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post