ಮಂಡ್ಯ: ಕೆಆರ್ಎಸ್ ಡ್ಯಾಂ ಸಮೀಪ ಕಲ್ಲು ಕುಸಿದಿದ್ದ ಕಾರಣ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಪರಿಶೀಲನೆ ನಡೆಸಿದರು. ಪರಿಶೀಲನೆಗಾಗಿ ತೆರಳಿದ್ದ ಶ್ರೀಕಂಠಯ್ಯ ಈ ವೇಳೆ ಮಾತನಾಡಿ.. ಕೆಆರ್ಎಸ್ ಡ್ಯಾಂಗೆ ಪೂಜೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ.. ದೃಷ್ಟಿ ಗೊಂಬೆ ಇಟ್ಟು ಡ್ಯಾಂಗೆ ಪೂಜೆ ಮಾಡಿಸುವ ಮೂಲಕ ಕೆಆರ್ಎಸ್ ಸುರಕ್ಷಿರವಾಗಿರಲಿ ಎಂದು ಪ್ರಾರ್ಥಿಸಲು ಚಿಂತಿಸಿದ್ದಾಗಿ ಹೇಳಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ್ದ ಶ್ರೀಕಂಠಯ್ಯ.. ಮನುಷ್ಯನ ಕಣ್ಣಿಗೆ ಮರನೂ ಸಿಡೀತು ಎಂಬ ಗಾದೆ ಇದೆ. ಒಂದಷ್ಟು ಜನರು ಪಾಪ ವೃತ್ತಿ ಮಾಡ್ಕೊಂಡಿದ್ದಾರೆ. ಹಾಗಾಗಿ ಡ್ಯಾಂಗೆ ದೃಷ್ಟಿ ಬಿದ್ದಾಗಿದೆ. ತಕ್ಷಣವೇ ದೃಷ್ಟಿ ಗೊಂಬೆ ಮಾಡಿಸುವಂತೆ ಸರ್ಕಾರಕ್ಕೆ ಹೇಳಿದ್ದೇನೆ. ಸರ್ಕಾರ ಯಾಕೋ ಇದರ ಬಗ್ಗೆ ನಿಗಾ ವಹಿಸ್ತಿಲ್ಲ. ಹೀಗಾಗಿ ನಾವೇ ದೃಷ್ಟಿ ಪೂಜೆ ಮಾಡ್ತೇವೆ ಎಂದಿದ್ದಾರೆ.
ಹಾಗೆಯೇ ಕಲ್ಲು ಕುಸಿತಕ್ಕೂ, ಕೆಆರ್ಎಸ್ ಡ್ಯಾಂಗೂ ಯಾವುದೇ ಸಂಬಂಧವಿಲ್ಲ. ಕೆಆರ್ಎಸ್ ಡ್ಯಾಂ ಸೇಫ್ ಆಗಿದೆ. ಗಾರ್ಡನ್ ಒಳಗೆ ಹೋಗುವ ಮಾರ್ಗದಲ್ಲಿ ಮಣ್ಣಿನಿಂದ ಕಟ್ಟಿದ್ದರಿಂದ ಈ ಕಲ್ಲು ಕುಸಿದಿದೆ. ಅದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಸರ್ಕಾರವೂ ಕೆಆರ್ಎಸ್ ಡ್ಯಾಂಗೇನು ಆಗಿಲ್ಲ ಎಂದು ವರದಿ ನೀಡಿದೆ ಎಂದು ತಿಳಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post