ಬೆಂಗಳೂರು: ಇತ್ತೀಚೆಗೆ ಬರ್ಬರವಾಗಿ ಕೊಲೆಯಾಗಿದ್ದ ರೌಡಿಶೀಟರ್ ಹರೀಶ್ ಕೊಲೆಯು ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಹೇಳಲಾಗ್ತಿದೆ.
ಇದೇ ತಿಂಗಳ 28ರಂದು ಬಾಣಸವಾಡಿ ಪೊಲೀಸ್ ಠಾಣೆ ಹತ್ತಿರ ಹಾಡು ಹಗಲೇ ರೌಡಿಶೀಟರ್ ಹರೀಶ್ನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಬಾಣಸವಾಡಿ ಪೊಲೀಸರು ಆತನ ಸ್ನೇಹಿತರಾದ ರಕ್ಷಿತ್, ಇಂದ್ರಜಿತ್, ನೆಲ್ಸನ್, ಸುಭಾಷ್, ಅಭಿಲಾಶ್ ಎಂಬುವರನ್ನ ಬಂಧಿಸಿ ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಹರೀಶ್ ಮೇಲೆ ಪೊಲೀಸ್ ಫೈರಿಂಗ್
ವಿಚಾರಣೆ ವೇಳೆ ಆರೋಪಿಗಳು ಹಳೆ ದ್ವೇಷದ ವೈಷಮ್ಯದ ಮೇಲೆ ಕೊಲೆ ಎಸಗಲಾಗಿದೆ ಎಂದು ಹೇಳಿದ್ದಾರೆ ಎನ್ನಲಾಗ್ತಿದೆ. ಕೊಲೆಯಾದ ರೌಡಿಶೀಟರ್ ಹರೀಶ್, ಆರೋಪಿಗಳ ಜೊತೆ ಉತ್ತಮ ಒಡನಾಟ ಹೊಂದಿದ್ದ ಎನ್ನಲಾಗಿದ್ದು, ಅವರ ಜೊತೆ ಸೇರಿ ಪಾರ್ಟಿ, ಕ್ರಿಕೆಟ್, ಸಿನಿಮಾ ಅಂತೆಲ್ಲಾ ಓಡಾಡ್ತಿದ್ದನಂತೆ.
ಹೀಗಿರುವಾಗ ಆರೋಪಿ ರಕ್ಷಿತ್ ಮೇಲೆ ಯಾವುದೋ ಕಾರಣಕ್ಕಾಗಿ ಕಿರಿಕ್ ಮಾಡಿಕೊಂಡ ಹರೀಶ್ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಮತ್ತು ಆಗಾಗ ರಕ್ಷಿತ್ಗೆ ಬೆದರಿಕೆಯನ್ನು ಹಾಕ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಆರೋಪಿ ರಕ್ಷಿತ್ ಹರೀಶ್ನನ್ನು ಮುಗಿಸಲು ಪ್ಲಾನ್ ಮಾಡಿಕೊಂಡಿದ್ದನಂತೆ, ಅದೇ ರೀತಿ ಇನ್ನುಳಿದ ತನ್ನ ಸ್ನೇಹಿತರ ಜೊತೆ ಸೇರಿ ಹರೀಶ್ ನನ್ನು ಹಾಡು ಹಗಲೇ ಕೊಚ್ಚಿ ಕೊಂದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post