ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ನೀರಜ್ ಚೋಪ್ರಾಗೆ ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಭರ್ಜರಿ ಗಿಪ್ಟ್ ಘೋಷಿಸಿದ್ದಾರೆ. ಸದ್ಯದಲ್ಲೇ ನೀರಜ್ ಛೋಪ್ರಾಗೆ XUV 700 ಕಾರು ಗಿಫ್ಟ್ ನೀಡುವುದಾಗಿ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.
ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಮಹತ್ತರ ಸಾಧನೆ ಮಾಡಿದ ನೀರಜ್ಗೆ ಆನಂದ್ ಮಹೀಂದ್ರಾ ಮೊದಲಿಗೆ ಅಭಿನಂದನೆಗಳನ್ನು ತಿಳಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ಗೆ ರೀಪ್ಲೆ ಮಾಡಿದ್ದ ಅಭಿಮಾನಿಯೋರ್ವ ನೀರಜ್ ಚೋಪ್ರಾಗೆ XUV 700 ಕಾರ್ ಕೊಡಿ ಎಂದಿದ್ದಾರೆ. ಇದಕ್ಕೆ ಯೆಸ್ ಎಂದ ಆನಂದ್ ಮಹೀಂದ್ರಾ ನೀರಜ್ ಚೋಪ್ರಾಗೂ XUV 700 ಕಾರ್ ಕೊಡುಗೆ ನೀಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಸೇನೆಗೆ ಸೇರುವಾಗ ಸಾಮಾನ್ಯ ಹುಡುಗ; ಇಂದು ಇಡೀ ವಿಶ್ವವನ್ನೇ ಗೆದ್ದ ನೀರಜ್ ಚೋಪ್ರಾ
ಇನ್ನು, ಹರಿಯಾಣ ಸರ್ಕಾರ ನೀರಜ್ ಚೋಪ್ರಾಗೆ 6 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ 6 ಕೋಟಿ ರೂಪಾಯಿ ಘೋಷಿಸಿದ ಬೆನ್ನಲ್ಲೇ ಆನಂದ್ರ ಮಹೀಂದ್ರಾ ನೀರಜ್ಗೆ ಭಾರೀ ಮೊತ್ತದ ಕಾರು ಗಿಫ್ಟ್ ಕೊಡೋದಾಗಿ ಟ್ವೀಟ್ ಮಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post