ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿ ಮೀರಿದೆ. 20 ವರ್ಷಗಳ ನಂತರ ತನ್ನ ಸೇನೆಯನ್ನು ಅಮೆರಿಕಾ ವಾಪಸ್ಸು ಕರೆಸಿಕೊಂಡ ಬಳಿಕ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ.
ತನ್ನ ಆಕ್ರಮಣಕಾರಿ ನೀತಿಯನ್ನು ಮುಂದುವರಿಸಿ ಬಹುತೇಕ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ತಾಲಿಬಾನಿಗಳಿಗೆ ಭಾರೀ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸಿಕ್ಕಿವೆ. ಅಮೆರಿಕಾ ಮತ್ತು ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್(NATO) ಬಿಟ್ಟು ಹೋದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ತಾಲಿಬಾನ್ ವಶಕ್ಕೆ ಪಡೆದಿದೆ.
ಯುದ್ಧ ವಿಮಾನಗಳು, ಅತ್ಯಾಧ್ಯುನಿಕ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಟ್ಯಾಂಕ್ಗಳು, ವಾಹನಗಳು, ರಾಕೆಟ್ಗಳು, ಬಾಂಬ್ಗಳು ಎಲ್ಲವೂ ಈಗ ತಾಲಿಬಾನ್ ಕೈ ಸೇರಿವೆ. 20 ವರ್ಷಗಳಿಂದ ಅಫ್ಘಾನಿಸ್ತಾನ ಭದ್ರತೆಗಾಗಿ ಬಿಲಿಯನ್ಗಟ್ಟಲೇ ಖರ್ಚು ಮಾಡಿದ್ದ ಅಷ್ಟೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಈಗ ತಮ್ಮ ಕೈಗೆ ಸಿಕ್ಕಿರುವುದು ತಾಲಿಬಾನಿಗಳ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ಜನರಲ್ ಅಬ್ದುಲ್ ರಶೀದ್ ಮನೆಗೆ ತಾಲಿಬಾನಿಗಳ ದಾಳಿ- ಸಿಕ್ಕಿದ್ದನ್ನೆಲ್ಲ ತಿನ್ನುತ್ತ ಅಟ್ಟಹಾಸ
ಇದನ್ನೂ ಓದಿ: ದೇಶ ತೊರೆಯಲು ಕಾಬೂಲ್ ಏರ್ಪೋರ್ಟ್ನಲ್ಲಿ ನೂಕುನುಗ್ಗಲು -ಗುಂಡೇಟಿಗೆ ಮೂವರು ಸಾವು
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post