ಬೆಂಗಳೂರು: ಖಾತೆ ಹಂಚಿಕೆ ಬೆನ್ನಲ್ಲೇ ಎದ್ದಿರುವ ಅಸಮಾಧಾನವನ್ನು ಬಿಜೆಪಿ ಹೈಕಮಾಂಡ್ ಗಮನಕ್ಕೆ ತರಲು ಹಮ್ಮಿಕೊಂಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿ ಪ್ರವಾಸ ದಿಢೀರ್ ರದ್ದಾಗಿದೆ. ಎಲ್ಲವೂ ಅಂದುಕೊಂಡತಾದರೆ ಈ ವಾರದ ಬದಲಿಗೆ ಮುಂದಿನ ವಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ.
ಕ್ಯಾಬಿನೆಟ್ ವಿಸ್ತರಣೆ ಬಳಿಕ ಅಸಮಾಧಾನ, ಕೊರೊನಾ ಮೂರನೇ ಅಲೆ, ಕೋವಿಡ್ ಲಸಿಕೆ ಹಂಚಿಕೆ ಪ್ರಸ್ತಾಪ ಸೇರಿದಂತೆ ಹಲವಾರು ವಿಚಾರಗಳನ್ನು ಚರ್ಚಿಸಲು ದೆಹಲಿ ಪ್ರವಾಸ ಹಮ್ಮಿಕೊಂಡಿದ್ದರು. ಸಿಎಂ ಬಸವರಾಜ್ ಬೊಮ್ಮಾಯಿ. ಆದರೀಗ, ದಿಢೀರ್ ದೆಹಲಿ ಪ್ರವಾಸ ರದ್ದಗಾಗಿದೆ. ಈ ದೆಹಲಿ ಪ್ರವಾಸವನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.
ನಾಳೆ ದೇವರಾಜ ಅರಸು ಜನ್ಮದಿನ ಇದೆ. ಶನಿವಾರ ವಿಜಯಪುರ ಹಾಗೂ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ ವಾರವೇ ದೆಹಲಿಗೆ ಹೋಗಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಲಸಿಕೆ ಹಂಚಿಕೆ ಸಂಬಂಧ ಚರ್ಚಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದರು.
ಇದನ್ನೂ ಓದಿ: ಮಮತಾಗೆ ಮುಖಭಂಗ: ಅತ್ಯಾಚಾರ, ಕೊಲೆ ಕೇಸ್ CBI ತನಿಖೆಗೆ ಕೊಟ್ಟ ಹೈಕೋರ್ಟ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post