ಚಂಡೀಗಡ: ಪಂಜಾಬ್ ಕಾಂಗ್ರೆಸ್ನಲ್ಲಿ ಮತ್ತೆ ಭಿನ್ನಮತ ಸ್ಪೋಟಗೊಂಡಿದೆ. ಇತ್ತೀಚೆಗೆ ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನವಜೋತ್ ಸಿಂಗ್ ಸಿಧುಗೆ ನೀಡುವ ಮೂಲಕ ಬಂಡಾಯ ಶಮನ ಮಾಡಿದ್ದರು. ಈ ಬೆನ್ನಲ್ಲೀಗ ಮತ್ತೆ ಬಂಡಾಯ ಶುರುವಾಗಿದ್ದು, ಕೆಲವು ಕಾಂಗ್ರೆಸ್ನ ಮಾಜಿ ಮತ್ತು ಹಾಲಿ ಶಾಸಕರು ಸಿಎಂ ಅಮರೀಂದರ್ ಸಿಂಗ್ ವಿರುದ್ಧ ಸಿಡಿದೆದಿದ್ದಾರೆ.
ಸಿಎಂ ಸ್ಥಾನದಿಂದ ಅಮರಿಂದರ್ ಸಿಂಗ್ರನ್ನು ಕೆಳಗಿಳಿಸುವಂತೆ ಕಾಂಗ್ರೆಸ್ನ ಹಾಲಿ 31 ಶಾಸಕರು ಮತ್ತು ಮಾಜಿ 7 ಮಂದಿ ಎಂಎಲ್ಎಗಳು ಹೈಕಮಾಂಡ್ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ. ಸಚಿವ ರಾಜಿಂದರ್ ಸಿಂಗ್ ಮನೆಯಲ್ಲಿ ಸೇರಿದ ಇಷ್ಟು ಕಾಂಗ್ರೆಸ್ ನಾಯಕರು, ಅಮರೀಂದರ್ ಸಿಂಗ್ ಜಾಗಕ್ಕೆ ಸಿಧು ತಂದು ಕೂರಿಸುವಂತೆ ಹೈಕಮಾಂಡ್ಗೆ ಮನವಿ ಮಾಡಲಿದ್ದಾರೆ.
ನಾಳೆಯೇ ಪಂಜಾಬ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪರ್ಗತ್ ಸಿಂಗ್ ಸೇರಿದಂತೆ ಆರು ಮಂದಿಯನ್ನು ಒಳಗೊಂಡ ಸದಸ್ಯರ ತಂಡವು ದೆಹಲಿಗೆ ಪ್ರಯಾಣ ಬೆಳಸಲಿದೆ. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಭೇಟಿ ಮಾಡಿ ಅಮರಿಂದರ್ ಸಿಂಗ್ ಬದಲಾವಣೆಗೆ ಒತ್ತಡ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಬಸ್ ಪಾಸ್ ವ್ಯವಸ್ಥೆ -ದರ ಏರಿಕೆ ಬಗ್ಗೆ ಸರ್ಕಾರ ಹೇಳಿದ್ದೇನು..?
ಅಮರಿಂದರ್ ಸಿಂಗ್ ತಮ್ಮ ಕೆಟ್ಟ ಕಾರ್ಯವೈಖರಿಯಿಂದ ಎಲ್ಲಾ ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ. ನಾವು ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಗಮನಕ್ಕೆ ಈ ವಿಚಾರ ತಂದು ಅಮರಿಂದರ್ ಸಿಂಗ್ ರಾಜೀನಾಮೆ ನೀಡುವಂತೆ ಮಾಡಿದ ಬಳಿಕಷ್ಟೇ ಪಂಜಾಬ್ಗೆ ವಾಪಸ್ಸಾಗಲಿದ್ದೇವೆ ಎಂದಿದ್ದಾರೆ ಪರ್ಗತ್ ಸಿಂಗ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post